ಓರಿಯಂಟಲ್ಗೆ ಜಯ
ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿ ಡಿವಿಷನ್ ಫುಟ್ಬಾಲ್ ಪಂದ್ಯಾವಳಿಯ ಬುಧವಾರದ ಪಂದ್ಯದಲ್ಲಿ ಓರಿಯಂಟಲ್ ತಂಡ, ರಾಯಲ್ಸ್ ತಂಡದ ವಿರುದ್ಧ 5-0 ಅಂತರದಲ್ಲಿ ಜಯಗಳಿಸಿದೆ. ಓರಿಯಂಟಲ್ ಪರ ಮಿಂಚಿದ ಮೂರ್ತಿ, ಪಂದ್ಯದಲ್ಲಿ ಐದು ಗೋಲುಗಳನ್ನು ಬಾರಿಸಿ ಗಮನ ಸೆಳೆದರು. ಪಂದ್ಯದ 24ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದ ಮೂರ್ತಿ, ಆನಂತರ, 28ನೇ, 49ನೇ, 51ನೇ ಹಾಗೂ 64ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಇನ್ನು, ತಿಲಕ್ ಮೆಮೋರಿಯಲ್ ಹಾಗೂ ಸರ್ಕಾರಿ ಮುದ್ರಣಾಲಯ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ತಿಲಕ್ ಮೆಮೋರಿಯಲ್ 6-0 ಅಂತರದಲ್ಲಿ ಜಯ ಸಾಧಿಸಿತು.