ಚಾಂಪಿಯನ್ಸ್ ಟ್ರೋಫಿ: ಸ್ಟಾರ್ ವಾಹಿನಿಗಳಲ್ಲಿ ನೇರಪ್ರಸಾರ
ನವದೆಹಲಿ: ಅಗ್ರಶ್ರೇಣಿಯ ಸ್ಟಾರ್ ಸ್ಪೋರ್ಟ್ಸ್ 2 ಹಾಗೂ ಸ್ಟಾರ್ ಕ್ರಿಕೆಟ್ ಕ್ರೀಡಾವಾಹಿನಿಗಳು ಜೂ. 6ರಿಂದ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಎಲ್ಲಾ ಪಂದ್ಯಗಳನ್ನೂ ನೇರಪ್ರಸಾರ ಮಾಡುವ ಹಕ್ಕನ್ನು ಪಡೆದಿವೆ. ಸ್ಟಾರ್ ಸ್ಪೋರ್ಟ್ಸ್ 2 ವಾಹಿನಿಯಲ್ಲಿ ಹಿಂದಿ ಭಾಷೆಯಲ್ಲಿಯೂ ಕ್ರಿಕೆಟ್ ವೀಕ್ಷಣ ವಿವರಣೆ ಕೇಳಬಹುದಾಗಿದ್ದು, ಸ್ಟಾರ್ ಕ್ರಿಕೆಟ್ ಹಾಗೂ ಸ್ಟಾರ್ ಕ್ರಿಕೆಟ್ನಲ್ಲಿ ಇಂಗ್ಲೀಷ್ ವೀಕ್ಷಣೆಯಿರುತ್ತದೆ ಎಂದು ಅಧಿಕೃತವಾಗಿ ಪ್ರಕಟಿಸಲಾಗಿದೆ. ಮೇ 30ರಿಂದ ಅಭ್ಯಾಸ ಪಂದ್ಯಗಳು ನಡೆಯಲಿದ್ದು, ಅಂದಿನಿಂದಲೇ ನೇರಪ್ರಸಾರ ಆರಂಭವಾಗಲಿದೆ.
1.5 ಬಿಲಿಯನ್ ವೀಕ್ಷಕರು: ಏತನ್ಮಧ್ಯೆ, ಚಾಂಪಿಯನ್ಸ್ ಟ್ರೋಫಿಯ ನೇರಪ್ರಸಾರ 1.5 ಮಿಲಿಯನ್ ವೀಕ್ಷಕರನ್ನು ತಲುಪಲಿದೆ ಎಂದು ಅಂದಾಜಿಸಲಾಗಿದೆ. ಒಟ್ಟು 180 ದೇಶಗಳಲ್ಲಿ ಈ ಪಂದ್ಯಾವಳಿಯನ್ನು ನೇರಪ್ರಸಾರ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.