ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸ್ಸು
ನವದೆಹಲಿ: ಭಾರತ ಸರ್ಕಾರದಿಂದ ನೀಡಲಾಗುವ ದ್ರೋಣಾಚಾರ್ಯ ಪ್ರಶಸ್ತಿಗೆ ಭಾರತೀಯ ಕುಸ್ತಿ ಸಂಸ್ಥೆ (ಡಬ್ಲ್ಯೂಎಫ್ಐ)ಯ ಮಹಾ ಕಾರ್ಯದರ್ಶಿ ರಾಜ್ ಸಿಂಗ್ ಹಾಗೂ ಹಿರಿಯ ಗುರು ಜಸ್ರಾಮ್ ಅವರ ಹೆಸರುಗಳನ್ನು ಡಬ್ಲ್ಯೂಎಫ್ಐ ಶಿಫಾರಸ್ಸು ಮಾಡಿದೆ. ಇನ್ನು, ಕ್ರೀಡಾಳುಗಳಾದ ಭಾಟಿಯಾ, ನೇಹಾ ರಾಟಿ, ಸುನಿಲ್ ರಾಣಾ ಹಾಗೂ ಧರ್ಮೇಂದ್ರ ದಲಾಲ್ ಅವರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ.