ವಿವಾದದ ನಡುವೆಯೂ ಕುಸ್ತಿ ಆಸೆ ಜೀವಂತ
ಸೇಂಟ್ ಪೀಟರ್ಸ್ಬರ್ಗ್: ಜನಪ್ರೀಯ ಕ್ರೀಡೆ ಕುಸ್ತಿ 2020ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅಂತಿಮಗೊಳಿಸಿರುವ ಪಟ್ಟಿಯ ಕ್ರೀಡೆಗಳಲ್ಲಿ ಸ್ಥಾನ ಪಡೆದುಕೊಂಡಿದೆ.
ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಇತರ ಎರಡು ಕ್ರೀಡೆಗಳೊಂದಿಗೆ ಅಂತಿಮಗೊಳಿಸಿರುವ ಪಟ್ಟಿಯಲ್ಲಿ ಕುಸ್ತಿ ಸ್ಥಾನ ಪಡೆದುಕೊಂಡಿದೆ. ಸಾಫ್ಟ್ಬಾಲ್ ಮತ್ತು ಬೇಸ್ಬಾಲ್ ಜಂಟಿ ಬಿಡ್ನಲ್ಲಿದ್ದು, ಸ್ಕ್ವಾಷ್ ಮತ್ತು ಕುಸ್ತಿ ಪ್ರತ್ಯೇಕವಾಗಿ ಬಿಡ್ಗೆ ಇಳಿಯಲಿವೆ.
ಸ್ಪರ್ಧೆಯಲ್ಲಿದ್ದ ಎಂಟು ಕ್ರೀಡೆಗಳ ಪೈಕಿ ಮೂರು ಕ್ರೀಡೆಗಳನ್ನು ಮಂಡಳಿ ಅಂತಿಮ ಪಟ್ಟಿಯಲ್ಲಿ ಉಳಿಸಿಕೊಂಡಿದೆ.
ಕುಸ್ತಿಯನ್ನು ಕಳೆದ ಫೆಬ್ರವರಿಯಲ್ಲಿ ಒಲಿಂಪಿಕ್ಸ್ನಿಂದ ಕೈಬಿಡಲಾಗಿತ್ತು. ಆದರೆ, ಈಗ ಒಲಿಂಪಿಕ್ಸ್ನಲ್ಲಿ ಉಳಿಯ ಭರವಸೆಯನ್ನು ಇನ್ನೂ ಉಳಿಸಿಕೊಂಡಿದೆ.