ವೇಯ್ಟ್ ಲಿಫ್ಟಿಂಗ್: ಭಾರತಕ್ಕೆ 3 ಚಿನ್ನ
ನವದೆಹಲಿ: ದೋಹಾದಲ್ಲಿ ನಡೆಯುತ್ತಿರುವ 13ನೇ ಯುವ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್ಷಿಪ್ನ ಬುಧವಾರದ ಸ್ಪರ್ಧೆಗಳಲ್ಲಿ ಭಾರತಕ್ಕೆ ಮೂರು ಚಿನ್ನ, ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳು ಲಭ್ಯವಾಗಿವೆ. ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಕ್ಷಯ್ ಅವರು, ಅಲ್ಲಿ ಒಂದು ಚಿನ್ನ ಗೆದ್ದರು. ಆನಂತರ, 109 ಕೆಜಿ ಹಾಗೂ 135 ಕೆಜಿ ವಿಭಾಗಗಳಲ್ಲೂ ಸ್ಪರ್ಧಿಸಿ ಅಲ್ಲೂ ಒಂದೊಂದು ಚಿನ್ನದ ಪದಕಗಳನ್ನು ಗೆದ್ದುಕೊಂಡರು. ಇನ್ನು, 69 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಲಾಲು, ಅಲ್ಲಿ ಬೆಳ್ಳಿ ಪದಕ ಗೆದ್ದು, ನಂತರ, ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ ಹಾಗೂ 242 ಕೆಜಿ ವಿಭಾಗದಲ್ಲಿ ಒಂದೊಂದು ಕಂಚನ್ನು ಗೆದ್ದರು. ಪಂದ್ಯಾವಳಿ ಆರಂಭವಾಗಿ ಎರಡು ದಿನಗಳಲ್ಲಿ ಭಾರತಕ್ಕೆ ಎಂಟು ಪದಕಗಳು ಲಭ್ಯವಾದಂತಾಗಿದೆ