ಶೂಟಿಂಗ್: 8ನೇ ಸ್ಥಾನಕ್ಕೆ ತೃಪ್ತಿಪಟ್ಟ ಹೀನಾ
ಮ್ಯೂನಿಚ್: ಒಲಿಂಪಿಯನ್ ಹೀನಾ ಸಿಧು ಐಎಸ್ಎಸ್ಎಪ್ ವಿಶ್ವ ಕಪ್ ಪಂದ್ಯಾವಳಿಯಲ್ಲಿ ಆಕರ್ಷಕ ಪ್ರದರ್ಶನ ನೀಡಿದ್ದಾರೆ. ಆದರೆ, ಪಂದ್ಯಾವಳಿಯಲ್ಲಿ ಮಹಿಳೆಯರ ವಿಭಾಗದಲ್ಲಿ ಹೀನಾ ಸಾಧನೆ ಭಾರತ ಪ್ರಶಸ್ತಿ ಗೆಲ್ಲಲು ಸಾಕಗಾಲಿಲ್ಲ.
ಪಂದ್ಯಾವಳಿಯ ಮಹಿಳೆಯರ 10 ಮೀಟರ್ ಏರ್ ಪಿಸ್ತೋಲ್ ವಿಭಾಗದಲ್ಲಿ ಭಾಗವಹಿಸಿದ್ದ ಹೀನಾ 8ನೇ ಸ್ಥಾನಕ್ಕೆಂ ತೃಪ್ತಿಪಟ್ಟರು.
76.1 ಅಂಕಗಳನ್ನು ಗಳಿಸಿದ ಹೀನಾ 8ನೇ ಸ್ಥಾನ ಪಡೆಯುವ ಮೂಲಕ ಪಂದ್ಯಾವಳಿಯಿಂದ ಹೊರಬಿದ್ದರು. 23 ವರ್ಷದ ಹೀನಾ ಅಂತಿಮ ಸುತ್ತಿಗೆ ಪ್ರವೇಶಿಸಿದ ನಂತರ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟರು. ಇದುವರೆಗೂ ಭಾರತದ ಯಾವುದೇ ಆಟಗಾರ್ತಿಯೂ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ.