ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಶ್ರೀನಿ ರಾಜಿನಾಮೆಗೆ ಶುಕ್ಲಾ, ಜೇಟ್ಲಿ ಆಗ್ರಹ

Rashmi Kasaragodu
Updated On : 30 May 2013, 12:07 pm

ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ, ಶ್ರೀನಿವಾಸನ್ ಅವರ ರಾಜಿನಾಮೆಯನ್ನು ಕೇಳುವವರ ಸಾಲಿಗೆ ಈಗ ಬಿಸಿಸಿಐ ಉಪಾಧ್ಯಕ್ಷ ಅರುಣ್ ಜೇಟ್ಲಿ ಹಾಗೂ ಕಾರ್ಯದರ್ಶಿ ರಾಜೀವ್ ಶುಕ್ಲಾ ಹೊಸದಾಗಿ ಸೇರ್ಪಡೆಯಾಗಿದ್ದಾರೆ.
ಈವರೆಗೆ ತಮ್ಮ ರಾಜಿನಾಮೆ ಕೇಳುತ್ತಿದ್ದವರಿಗೆ ಹಾರಿಕೆ ಉತ್ತರ ನೀಡುತ್ತಿದ್ದ ಶ್ರೀನಿವಾಸನ್ ಅವರಿಗೆ ಈಗ ಬಿಸಿಸಿಐನ ಪ್ರಮುಖ ಹುದ್ದೆಗಳಲ್ಲಿರುವ ಜೇಟ್ಲಿ ಹಾಗೂ ಶುಕ್ಲಾ ಅವರೇ ರಾಜಿನಾಮೆ ಕೇಳಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಶುಕ್ಲಾ, ಜೇಟ್ಲಿ ಹೇಳೋದೇನು?: ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಅವರು ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ವಿಚಾರಣೆ ಎದುರಿಸುತ್ತಿದ್ದು, ಸ್ಪಾಟ್ ಫಿಕ್ಸಿಂಗ್ ಹಗರಣದ ತನಿಖೆ ಸಂಪೂರ್ಣವಾಗಿ ಮುಗಿಯುವವರೆಗೂ ಶ್ರೀನಿವಾಸ್ ಅವರು ಬಿಸಿಸಿಐನಿಂದ ದೂರ ಉಳಿಯುವುದು ಒಳ್ಳೆಯದೆಂದು ಶುಕ್ಲಾ ಹಾಗೂ ಜೇಟ್ಲಿ ಇಬ್ಬರ ಅಭಿಮತವಾಗಿದೆ. ಹೀಗಾಗಿ,ಶ್ರೀನಿವಾಸನ್ ಅವರ ರಾಜಿನಾಮೆಗೆ ಇಬ್ಬರೂ ಒತ್ತಾಯಿಸಿದ್ದಾರೆ ಎಂದು ಹೇಳಲಾಗಿದೆ.
ಮಂಗಳವಾರವಷ್ಟೇ, ಬಿಸಿಸಿಐ ಆಡಳಿತ ಮಂಡಳಿಯ ಹಿರಿಯ ಸದಸ್ಯ ಜ್ಯೋತಿರಾದಿತ್ಯ ಸಿಂಧಿಯಾ ಅವರು ಶ್ರೀನಿವಾಸನ್ ಅವರ ರಾಜಿನಾಮೆಗೆ ಒತ್ತಾಯಿಸಿದ್ದರು. ಅವರ ಆಗ್ರಹಕ್ಕೆ ಈಗ ಶುಕ್ಲಾ, ಜೇಟ್ಲಿ ಸಹ ದನಿಗೂಡಿಸಿರುವುದು ಶ್ರೀನಿವಾಸ್ ಅವರ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿಸಿದೆ.
ಇದಕ್ಕೆ ಸಂಬಂಧಿಸಿದಂತೆ, ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶುಕ್ಲಾ, 'ಶ್ರೀನಿವಾಸ್ ಅವರು ಚುನಾಯಿತ ಅಧ್ಯಕ್ಷ.  ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ, ಅವರ ಅಳಿಯನ ಬಗ್ಗೆಯೇ ತನಿಖೆ ನಡೆಯುತ್ತಿದೆ.
ಹಾಗಾಗಿ, ಅವರು ಅಧ್ಯಕ್ಷಗಿರಿಯಂಥ ಪ್ರಭಾವಿ ಹುದ್ದೆಯಲ್ಲಿದ್ದರುವುದು ಸರಿಯಲ್ಲ. ಹಾಗಾಗಿ, ಅವರು ತನಿಖೆ ಪೂರ್ಣಗೊಳ್ಳುವವರೆಗೆ ಬಿಸಿಸಿಐನಿಂದ ದೂರ ಉಳಿಯುವುದು ಒಳ್ಳೆಯದು. ಉಪಾಧ್ಯಕ್ಷ ಜೇಟ್ಲಿ ಅವರದ್ದೂ ಇದೇ ಅಭಿಪ್ರಾಯ' ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement