ಪಿಂಕ್ ಜಸ್ಸಿಕಾ
ಭಾರತದಲ್ಲಿ ದೊಡ್ಡ ಕ್ರೀಡಾಕೂಟಗಳು ನಡೆದರೆ ಅಲ್ಲಿ ಬಾಲಿವುಡ್ ತಾರೆಗಳು ಮಿಂಚುತ್ತಾರೆ. ಆದರೆ, ಇತ್ತೀಚೆಗಷ್ಟೇ ಗ್ರೇಟರ್ ನೋಯಿಡಾದ ಬುದ್ಧ ಇಂಟರ್ನ್ಯಾಷನಲ್ ಸರ್ಕಿಟ್ನಲ್ಲಿ ನಡೆದ ಇಂಡಿಯನ್ ಗ್ರಾನ್ ಪ್ರೀಯಲ್ಲಿ ಮಿಂಚಿದ್ದು ಮಾತ್ರ ಇಂಗ್ಲೆಂಡ್ನ ಫಾರ್ಮುಲಾ 1 ಚಾಲಕ ಜೆನ್ಸೆನ್ ಬಟನ್ ಗರ್ಲ್ಫ್ರೆಂಡ್ ಜೆಸ್ಸಿಕಾ ಮಿಚಿಬಾತಾ.
29 ವರ್ಷದ ರೂಪದರ್ಶಿ ಜೆಸ್ಸಿಕಾ ಅವರು ಪಿಂಕ್ ಸೀರೆಯಲ್ಲಿ ಪೋಸ್ ನೀಡುವ ಮೂಲಕ ಬುದ್ಧ ಇಂಟರ್ನ್ಯಾಷನಲ್ ಸರ್ಕಿಟ್ನಲ್ಲಿ, ಅದರಲ್ಲೂ ಬಾಲಿವುಡ್ ತಾರೆಗಳ ಅನುಪಸ್ಥಿತಿಯಲ್ಲಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
ನೀಟಾಗಿ ತಲೆ ಬಾಚಿಕೊಂಡು ತುರುಬು ಕಟ್ಟಿಕೊಂಡು, ಪಿಂಕ್ ಸೀರೆ ಉಟ್ಟುಕೊಂಡಿದ್ದ ಜೆಸ್ಸಿಕಾ ಅವರು ತೇಟ್ ಬಾಲಿವುಡ್ ತಾರೆಯರಂತೆ ಮಿಂಚಿದ್ದೇ ಮಿಂಚಿದ್ದು. ಅಚ್ಚರಿಯ ವಿಷಯವೆಂದರೆ, ಸೀರೆಯುಟ್ಟ ಮೇಲೆ ತಾನು ಅಪ್ಪಟ ಭಾರತೀಯಳು ಎನಿಸಿಬಿಟ್ಟಿತ್ತಂತೆ ಜೆಸ್ಸಿಕಾಗೆ!