ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬೇಟೆಗಾರ

Vishwanath S
Updated On : 8 Nov 2013, 6:15 am

ವಿಶ್ವದ ಶ್ರೇಷ್ಠ ಈಜುಗಾರ ಮೈಕೆಲ್ ಫೆಲ್ಪ್ಸ್ ಆತನಿಗೆ ಸ್ಫೂರ್ತಿ. ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಮಹತ್ವಾಕಾಂಕ್ಷೆ. ಈಜಿನಲ್ಲಿ ಹೊಸ ಅಲೆ ಮೂಡಿಸಬೇಕು ಎಂಬ ಆಶಾವಾದ. ಈ ಹುರುಪಿನಲ್ಲಿ ರಾಷ್ಟ್ರಮಟ್ಟದಲ್ಲಿ ಸಾಗುತ್ತಿದ್ದಾನೆ ಜೇನುಕಲ್ಲಿನ 'ಮೀನು' ಹೇಮಂತ್.
ಸ್ಪರ್ಧಿಸಿದ ಮೊದಲ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಹೆಮ್ಮೆ ಈ ಹುಡುಗನದು. 14 ವರ್ಷದ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ಹಲವಾರು ಪದಕ ಗೆದ್ದ ಪ್ರತಿಭಾವಂತ. ಆಕಸ್ಮಿಕವಾಗಿ ಈಜಿನಲ್ಲಿ ತೊಡಗಿಸಿಕೊಂಡ ಹೇಮಂತ್‌ಗೆ ಈಗ ಅದೇ ಉಸಿರು. ಪದಕಗಳನ್ನು ಕೊಳ್ಳೆ ಹೊಡೆದು ರಾಜ್ಯಕ್ಕೆ ಮತ್ತು ದೇಶಕ್ಕೆ ಆಸ್ತಿಯಾಗುವ ಕನಸು.
ರಾಷ್ಟ್ರಮಟ್ಟದಲ್ಲಿ ಮೂರು ಚಿನ್ನದ ಪದಕ, 6 ಬೆಳ್ಳಿಯ ಪದಕ ಒಂದು ಕಂಚಿನ ಪದಕ ಗೆದ್ದಿರುವುದು ಇದುವರೆಗಿನ ಆತನ ಸಾಧನೆ. ರಾಜ್ಯಮಟ್ಟದಲ್ಲಿನ 40ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾನೆ. ರಾಜ್ಯ ಮಟ್ಟದಲ್ಲಿ 200 ಮೀಟರ್ ವೈಯಕ್ತಿಕ ಮಿಡ್ಲೆಯಲ್ಲಿ ನೂತನ ದಾಖಲೆ ಮಾಡಿದ್ದಾನೆ (ಡಿಸೆಂಬರ್ 2012). ದಕ್ಷಿಣ ವಲಯ ವಿಭಾಗದಲ್ಲಿ (ಸೌತ್ ಇಂಡಿಯಾ) 100 ಮೀಟರ್ ಬ್ಯಾಕ್ ಸ್ಟ್ರೋಕ್ ನೂತನ ದಾಖಲೆ, 200 ಮೀಟರ್ ವೈಯಕ್ತಿಕ ಮಿಡ್ಲೆಯಲ್ಲಿ ನೂತನ ದಾಖಲೆ ಬರೆದಿದ್ದಾನೆ (ಡಿಸೆಂಬರ್ 2012).
ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ವಡೇರನಹಳ್ಳಿಯ ಹೇಮಂತ್ ಆಟವಷ್ಟೇ ಅಲ್ಲ, ಪಾಠದಲ್ಲಿಯೂ ಮುಂದು. 8ನೇ ತರಗತಿ ಓದುತ್ತಿರುವುದು ಬೆಂಗಳೂರು ಬಸವೇಶ್ವರನಗರದ ಕಡಂಬಿ ವಿದ್ಯಾಕೇಂದ್ರದಲ್ಲಿ. ಇದಲ್ಲದೇ ಸಿದ್ದಗಂಗಾ ಸಂಸ್ಥೆ ನಡೆಸುತ್ತಿರುವ ಅಂಬುಜ ಸಂಸ್ಕೃತ ಶಾಲೆಯಲ್ಲಿ ಪ್ರಥಮ, ಕಾವ್ಯವನ್ನು ಮುಗಿಸಿ ಸಾಹಿತ್ಯಾಭ್ಯಾಸ ಮಾಡುತ್ತಿದ್ದಾನೆ. ಸ್ಕೌಟ್‌ನಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸೋಪಾನದ ಹಂತದಲ್ಲಿದ್ದಾನೆ. ಜೇನುಕಲ್ ಅನ್ನೋದು ಮನೆತನದ ಹೆಸರು.
ಅವನಿಗೆ ಸ್ಫೂರ್ತಿ ಮೈಕೆಲ್ ಫೆಲ್ಪ್ಸ್. ಒಲಿಂಪಿಕ್ಸ್‌ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಬೇಕೆಂಬ ಆಸೆ. ಮೊದಲು ಎರಡು ವರ್ಷ ಪಿ.ಎಂ. ಎಸ್.ವಿ. ಸ್ವಿಮ್ಮಿಂಗ್ ಸೆಂಟರ್‌ನಲ್ಲಿ ಮಠಪತಿ ಎಂಬುವವರಲ್ಲಿ ತರಬೇತಿ ಪಡೆದು ನಂತರ ಸದಾಶಿವನಗರದ ಗ್ಲೋಬಲ್ ಈಜು ಸೆಂಟರ್‌ನಲ್ಲಿ ಜಯರಾಜ್ ಹಾಗೂ ಜಗನ್ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾನೆ. ಡಿಸೆಂಬರ್ 2013ರಲ್ಲಿ ಪುಣೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆಯುವ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗೆ 5 ವಿಭಾಗದಲ್ಲಿ ಆಯ್ಕೆಯಾಗಿದ್ದಾನೆ.
ಇದುವರೆಗೂ ಪಡೆದಿರುವ ಪ್ರಮುಖ ಪ್ರಶಸ್ತಿಗಳು

1. 40ನೇ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್‌ಶಿಪ್ 2013
ಎ) 200 ಮೀಟರ್ ಇಂಡೂವಿಜುಯಲ್ ಮಿಡ್ಲೇಯಲ್ಲಿ ಮೊದಲನೇ ಸ್ಥಾನ.
ಬಿ) 400 ಮೀಟರ್ ಇಂಡೂವಿಜುಯಲ್ ಮಿಡ್ಲೇಯಲ್ಲಿ ಎರಡನೇ ಸ್ಥಾನ.
ಸಿ) 200 ಮೀಟರ್ ಬ್ಯಾಕ್ ಸ್ಟ್ರೋಕ್ ಎರಡನೇ ಸ್ಥಾನ.
ಡಿ) 200 ಮೀಟರ್ ಫ್ರೀಸ್ಟೈಲ್ ಮೊದಲನೇ ಸ್ಥಾನ.
ಇ) 4x200 ಮೀಟರ್ ಫ್ರೀಸ್ಟೈಲ್ ಮೂರನೇ ಸ್ಥಾನ.
ಎಫ್) 4x100 ಮೀಟರ್ ಫ್ರೀಸ್ಟೈಲ್ ಎರಡನೇ ಸ್ಥಾನ.
ಜಿ) 4x100 ಮೀಟರ್ ಮಿಡ್ ಲೇ ರಿಲೇ ಎರಡನೇ ಸ್ಥಾನ.

2. 29ನೇ ಸಬ್ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್‌ಶಿಪ್ 2012
ಎ) 200 ಮೀಟರ್ ಫ್ರೀಸ್ಟೈಲ್ ಎರಡನೇ ಸ್ಥಾನ.
ಬಿ) 4x50 ಮೀಟರ್ ಮಿಡ್ಲೇ ರಿಲೇ ಮೊದಲನೇ ಸ್ಥಾನ.
ಬಿ) 4x50 ಮೀಟರ್ ಫ್ರೀಸ್ಟೈಲ್ ರಿಲೇ ಎರಡನೇ ಸ್ಥಾನ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement