ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಎಲ್ಲೆಲ್ಲೂ ಕ್ರಿಕೆಟ್ಟು!

Lingaraj Badiger
Updated On : 22 Nov 2013, 6:45 am

ಕ್ರಿಕೆಟ್ ಅನ್ನು ಮೈದಾನದಲ್ಲಿ ಆಡುವುದು ಸಹಜ. ಒಂದು ವೇಳೆ ಮೈದಾನದಲ್ಲಿ ಸಾಧ್ಯವಾಗದಾಗ ರಸ್ತೆಯಲ್ಲಿ, ಮನೆಯ ಅಂಗಳದಲ್ಲಿ ಅಥವಾ ಮಹಡಿ ಮೇಲೂ ಆಡುವುದು ಸಾಮಾನ್ಯ. ಆದರೆ ಬೆಟ್ಟದ ಮೇಲೆ, ನೀರಿನಲ್ಲಿ, ಸೇತುವೆ ಮೇಲೆ, ರೈಲಿನ ಮೇಲೆ, ಬಂಡೆಗಳ ಮೇಲೆ, ನದಿ ತೀರದಲ್ಲಿ ಕ್ರಿಕೆಟ್ ಆಡಿದರೆ...?

ಇದೆಂಥ ಹುಚ್ಚು ಆಲೋಚನೆ ಎನ್ನಬೇಡಿ. ಇಂಥ ವಿಭಿನ್ನ ಸ್ಥಳಗಳಲ್ಲಿ ಕ್ರಿಕೆಟ್ ಆಡಿಸುವ ಯೋಚನೆ ಕ್ರಿಕೆಟ್ ಕ್ಲಬ್‌ವೊಂದಕ್ಕೆ ಹೊಳೆದಿರುವುದಂತೂ ನಿಜ. ಕ್ಲಬ್‌ಗೆ ಈ ರೀತಿಯಾದ ಯೋಚನೆ ಹೊಳೆಯಲು ಒಂದು ಕಾರಣವಿದೆ.  ಕಳೆದ ವರ್ಷ ಪ್ರವಾಹ ಬಂದು ಈ ಕ್ರಿಕೆಟ್ ಕ್ಲಬ್‌ನ ಮೈದಾನ ಸಂಪೂರ್ಣ ಹಾಳಾಗಿತ್ತು. ಈ ಪಿಚ್ ಅನ್ನು ಮತ್ತೆ ಸಿದ್ಧಪಡಿಸಲು ಹಣವಿರಲಿಲ್ಲ. ಹಾಗಾಗಿ ದೇಣಿಗೆ ಸಂಗ್ರಹಿಸಲು ನಿರ್ಧರಿಸಿತು. ತನ್ನದೇ ಕ್ಯಾಲೆಂಡರ್ ಹೊರತಂದು ಅದರಿಂದ ಹಣ ಸಂಗ್ರಹಿಸುವುದು ಮೂಲ ಯೋಜನೆಯಾಗಿತ್ತು. ಆದರೆ ಕ್ಯಾಲೆಂಡರ್ ಅನ್ನು ವಿಭಿನ್ನವಾಗಿ ಸಿದ್ಧಪಡಿಸಬೇಕೆಂದು ಕ್ಲಬ್ ಸದಸ್ಯರು ಆಲೋಚಿಸಿದರು. ಆಗ ಹೊಳೆದ ಉಪಾಯವೇ ವಿಭಿನ್ನ ಹಾಗೂ ಭಯಾನಕ ಸ್ಥಳಗಳಲ್ಲಿ ಕ್ರಿಕೆಟ್ ಆಡುವ ಫೋಟೊಗಳನ್ನು ತೆಗೆದು ಅದನ್ನು ಕ್ಯಾಲೆಂಡರ್‌ನಲ್ಲಿ ಬಳಸಬೇಕೆನ್ನುವುದು! ಕ್ಲಬ್‌ನ ಸದಸ್ಯರು ಚಿತ್ರಗಳ ಹೊಣೆಯನ್ನು ಹೊರಿಸಿದ್ದು ಸ್ಥಳೀಯ ಫೋಟೋಗ್ರಾಫರ್ ಸ್ಟುವರ್ಟ್ ಹೊಲ್ಮಸ್ ಮೇಲೆ. ಬೆಟ್ಟಗಳ ತುದಿಯಲ್ಲಿ, ಹೆಪ್ಪುಗಟ್ಟಿರುವ ಮಂಜಿನ ಮೇಲೆ, ನೀರಿನ ಒಳಗೆ, ಬಂಡೆಗಳ ಮೇಲೆ, ತೂಗಾಡುವ ಸೇತುವೆ ಮೇಲೆ ಹೀಗೆ ಹಲವು ವಿಭಿನ್ನ ಸ್ಥಳಗಳಲ್ಲಿ ಕ್ರಿಕೆಟ್ ಆಡುತ್ತಿರುವ ಫೋಟೊಗಳನ್ನು ತೆಗೆದರು ಹೊಲ್ಮಸ್. ಆಕರ್ಷಕ ಕ್ಯಾಲೆಂಡರ್ ಕೂಡ ಸಿದ್ಧವಾಯಿತು. ಅಂದಹಾಗೆ, ಫೋಟೋ ತೆಗೆಯಲು ಸ್ಟುವರ್ಟ್ ತೆಗೆದುಕೊಂಡಿದ್ದು ಬರೋಬ್ಬರಿ 10 ತಿಂಗಳು!

- ಸೋಮಶೇಖರ ಪಿ. ಭದ್ರಾವತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement