ಎಲಿಜಬೆತ್ಗೆ ಮಗು ಬೇಕಂತೆ
ಆಸ್ಟ್ರೇಲಿಯಾದ ಮಾಜಿ ಸ್ಪಿನ್ ದಂತಕತೆ ಶೇನ್ ವಾರ್ನ್ ಅವರಿಗೆ ಎರಡನೇ ಪತ್ನಿಯಾಗಿ ಜೀವನ ನಡೆಸುತ್ತಿದ್ದ ರೂಪದರ್ಶಿ ಹಾಗೂ ನಟಿ ಎಲಿಜಬೆತ್ ಹರ್ಲೆ ಅವರಿಗೆ ಈಗ ತಾಯಿಯಾಗುವ ಆಸೆಯಾಗಿದೆಯಂತೆ. ಅಂದರೆ, ಆಕೆ ಈಗ ವಾರ್ನ್ ಅವರಿಂದ ಬಿಡುಗಡೆಯಾಗಲು ಯತ್ನಿಸುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಇಬ್ಬರಿಗೂ ಡೈವರ್ಸ್ ಆಗುತ್ತೆ ಅಂತ ಕೆಲ ವದಂತಿಗಳೂ ಹರಡಿವೆ. ಆದರೆ, ಈ ಹಂತದಲ್ಲಿ ಆಕೆಗೆ ಮಗು ಪಡೆಯುವ ಆಸೆಯಾಗಿದೆಯಂತೆ. ಶೇನ್ ವಾರ್ನ್ ಅವರಿಂದ ಮಗುವೊಂದನ್ನು ಪಡೆದ ನಂತರವಷ್ಟೇ ತಾನು ವಾರ್ನ್ಗೆ ಡೈವರ್ಸ್ ನೀಡುವುದಾಗಿ ಆಕೆ ತಿಳಿಸಿದ್ದಾರೆ. ಆದರೆ, ಹರ್ಲೆಗೆ ಈಗ ವಯಸ್ಸು 44. ಇಷ್ಟೊಂದು ಏರು ಹೊತ್ತಿನಲ್ಲಿ ಆಕೆಯ ಕೈಲಿ ಮಗು ಹೆರಲು ಸಾಧ್ಯವಾ ಅಂತಲೂ ಕೆಲವರು ಯೋಚಿಸುತ್ತಿದ್ದಾರೆ. ಆದರೆ, ಎಲಿಜಬೆತ್ ಮಾತ್ರ ಟ್ರೈ ಮಾಡೋದ್ರಲ್ಲಿ ತಪ್ಪೇನಿದೆ ಎನ್ನುತ್ತಿದ್ದಾರಂತೆ.