ಆ ಒಂದು ಫೋಟೋ ಸುತ್ತ...
ಸುಮ್ನೇ ಇರಲಾರದೇ ಚಡ್ಡಿ ಒಳಗೆ ಇರುವೆ ಬಿಟ್ಕೋಳೋದು ಅಂದ್ರೆ ಇದು... ಸ್ಕಾಟ್ಲೆಂಡ್ನ ಫುಟ್ಬಾಲಿಗ ಚಾರ್ಲಿ ಮಲ್ಗ್ರೂ ಇಂಥದ್ದೊಂದು ಕೆಲ್ಸ ಮಾಡ್ಕೊಂಡಿರೋ ...
ಸುಮ್ನೇ ಇರಲಾರದೇ ಚಡ್ಡಿ ಒಳಗೆ ಇರುವೆ ಬಿಟ್ಕೋಳೋದು ಅಂದ್ರೆ ಇದು... ಸ್ಕಾಟ್ಲೆಂಡ್ನ ಫುಟ್ಬಾಲಿಗ ಚಾರ್ಲಿ ಮಲ್ಗ್ರೂ ಇಂಥದ್ದೊಂದು ಕೆಲ್ಸ ಮಾಡ್ಕೊಂಡಿರೋ ಆಸಾಮಿ. ಯಾವ್ದೋ ಹುಡ್ಗೀ ಜೊತೆ ಬೆತ್ತಲೆಯಾಗಿ ನಿಂತ್ಕೊಂಡಿರೋ ಫೋಟೋ ತೆಗೆಸಿಕೊಂಡಿದ್ದ ಆತ, ಅದನ್ನೇ ಭಾನುವಾರ ರಾತ್ರಿ ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿಬಿಟ್ಟಿದ್ದ. ಬೆತ್ತಲೆ ಫೋಟೋ ಅಂದ್ಮೇಲೆ ಕೇಳ್ಬೇಕೆ? 'ಸಹೃದಯ ಓದುಗರು' ಇದಕ್ಕೆ ರಸಿಕತೆಯಿಂದ ಪ್ರತಿಕ್ರಿಯಿಸಿದ್ದಾರೆ. ಆದರೆ, ಸಾಂಪ್ರದಾಯಿಕ ಓದುಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ದಿನಗಳೆದಂತೆ ಇದು ದೊಡ್ಡ ವಿವಾದವಾಗಿ ಏರ್ಪಟ್ಟಿದೆ. ತಕ್ಷಣ ಜಾಗೃತನಾದ ಚಾರ್ಲಿ ಆ ಫೋಟೋದಲ್ಲಿರುವ ವ್ಯಕ್ತಿಗೂ, ನನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾನೆ. ಆದರೆ, ಸತ್ಯ ಏನು ಅಂತ 'ವಸ್ತು' ವಿಷಯ ಗೊತ್ತಿರೋ ಆ ಫೋಟೋದಲ್ಲಿನ ಹುಡುಗಿಗೇ ಗೊತ್ತು.