ಕಾಲಿಲ್ಲದವ ಮೀನಾಗಿಬಿಟ್ಟ!
ಆತ ಕೇವಲ ಏಂಟು ವರ್ಷಗಳ ಪೋರ. ಆಗಲೇ ಮೆದುಳು ಸಂಬಂಧಿ ಕಾಯಿಲೆಯಿಂದಾಗಿ ತನ್ನೆರಡೂ ಕಾಲುಗಳನ್ನು ಕಳೆದುಕೊಂಡ. ಆದರೆ, ಜೀವನದಲ್ಲಿ ಹತಾಶನಾಗಲಿಲ್ಲ...
ಆತ ಕೇವಲ ಏಂಟು ವರ್ಷಗಳ ಪೋರ. ಆಗಲೇ ಮೆದುಳು ಸಂಬಂಧಿ ಕಾಯಿಲೆಯಿಂದಾಗಿ ತನ್ನೆರಡೂ ಕಾಲುಗಳನ್ನು ಕಳೆದುಕೊಂಡ. ಆದರೆ, ಜೀವನದಲ್ಲಿ ಹತಾಶನಾಗಲಿಲ್ಲ. ತನ್ನ ಸ್ನೇಹಿತರು ಈಜು ಹೊಡೆಯುವುದನ್ನು ನೋಡಿ ತಾನೂ ಅದರ ಬಗ್ಗೆ ಆಸಕ್ತಿ ಬೆಳೆಸಿಕೊಂಡ. ಈಜಿನ ಕನಸು ಕಾಣಲಾರಂಭಿಸಿದ. ನಂತರ ಅದಕ್ಕೆ ಆಸರೆಯಾಗಿ ನಿಂತ ಆತನ ಪೋಷಕರು, ಅವನ ಕನಸು ನನಸಾಗಲು ಟೊಂಕಕಟ್ಟಿ ನಿಂತರು.
ಸೀರನ್ ಕೆಲ್ಸೋ ಎಂಬ ಇಂಗ್ಲೆಂಡಿನ ಈ ಪುಟ್ಟ ಬಾಲಕ ತನ್ನ ಕಾಲುಗಳನ್ನು ಕಳೆದುಕೊಂಡು ವೀಲ್ಚೆರ್ ಅನ್ನು ಅವಲಂಬಿಸಿದ. ಆಗ ಆತನಿಗೆ ಕೃತಕ ಕಾಲುಗಳನ್ನು ಅಳವಡಿಸಲಾಯಿತಾದರೂ, ಆತ ತನ್ನ ಸ್ನೇಹಿತರೊಂದಿಗೆ ಈಜಬೇಕೆಂಬ ಆಸೆ ಹೆಚ್ಚಾಯಿತು. ನಂತರ ರಜೆಯ ವೇಳೆ ಫ್ಲೋರಿಡಾದಲ್ಲಿನ ಡಾಲ್ಫಿನ್ ನೋಡಲು ಹೋದ ಸೀರನ್ಗೆ, ಅದು ಈಜುವುದನ್ನು ಕಂಡು ಬಹಳ ಕುತೂಹಲನಾದ. ಇದನ್ನು ಗಮನಿಸಿದ ಈತನ ಪೋಷಕರು ಅವನಿಗೆ ಕೃತಕ ಫ್ಲಿಪ್ಪರ್ಸ್ (ಈಜುಕಾಲು)ಗಳನ್ನು ಅಳವಡಿಸಿದರು. ನಂತರ ತರಬೇತಿಯನ್ನೂ ನೀಡಲಾಯಿತು. ಫ್ಲಿಪ್ಪರ್ಸ್ ಅಳವಡಿಸಿದ ನಂತರ ನೀರಿನಲ್ಲಿ ವೇಗವಾಗಿ ಈಜತೊಡಗಿದ ಈತ. ಕೇವಲ ಒಂದೇ ವರ್ಷದಲ್ಲಿ ಈತ ಇತರರು ಹುಬ್ಬೇರಿಸುವಂತೆ ಮೀನಾಗಿಬಿಟ್ಟ. ನಂತರ ಶಾಲಾ ಕಾಲೇಜುಗಳ ಸ್ಪರ್ಧೆಗಳಲ್ಲಿ ಪಾಲ್ಗೊಂಡು, ಸೀರಿನ್ ಈಗ ಹಲವು ಪದಕಗಳನ್ನು ಗೆದ್ದು ಅಚ್ಚರಿಗೆ ಕಾರಣನಾಗಿದ್ದಾನೆ.