ಫ್ರೆಂಡ್ ಜೊತೆ ಹರ್ಲೆ ಸ್ನಾನ!
ಶೇನ್ ವಾರ್ನ್ನ ಪ್ರೇಯಸಿ, ಎರಡು ದಿನಗಳ ಹಿಂದೆ ಹೊಸ ಬಾಯ್ಫ್ರೆಂಡ್ ಜೊತೆ ಒಟ್ಟಿಗೇ ಸ್ನಾನ ಮಾಡಿದ್ದಾಳಂತೆ. ..
ಶೇನ್ ವಾರ್ನ್ನ ಪ್ರೇಯಸಿ, ಎರಡು ದಿನಗಳ ಹಿಂದೆ ಹೊಸ ಬಾಯ್ಫ್ರೆಂಡ್ ಜೊತೆ ಒಟ್ಟಿಗೇ ಸ್ನಾನ ಮಾಡಿದ್ದಾಳಂತೆ. ಇದನ್ನು ಕೇಳಿ ವಾರ್ನ್ ಕಂಗಾಲಾಗಿದ್ದಾನೋ ಇಲ್ವೋ ಗೊತ್ತಿಲ್ಲ. ಆದರೆ, ಟ್ವಿಟರ್ನಲ್ಲಿ ಹರ್ಲೆಯ ಈ ಸಂದೇಶ ಕಾಣಿಸಿಕೊಳ್ಳುತ್ತಿದ್ದಂತೇ ಆಕೆಯ 4 ಲಕ್ಷ ಫಾಲೋವರ್ಗಳಂತೂ ದಂಗಾಗಿದ್ದಾರೆ. ಅಷ್ಟಕ್ಕೂ ಆಕೆಯ ಹೊಸ ಫ್ರೆಂಡ್ ಯಾರು? ಫಾಲ್ಸ್ ವಿಡೋ ಸ್ಪೈಡರ್ ಎಂಬ ಹೆಸರಿನ ಜೇಡರ ಹುಳು! ಆಕೆ ಮೊನ್ನೆ ಸ್ನಾನಕ್ಕೆ ಹೋಗಿದ್ದಾಗ ಇದು ಆಕೆಯ ಬಾತ್ರೂಮ್ನಲ್ಲೇ ಇತ್ತಂತೆ. ಸ್ನಾನ ಮುಗಿದ ಮೇಲೆ ಆಕೆ ಇದನ್ನು ನೋಡಿ, ಆನಂತರ ಕಿಟಕಿಯಿಂದ ಆಚೆ ಎಸೆದಿದ್ದಾಳೆ. ಈ ವಿಷಯಕ್ಕೆ ಬಣ್ಣ ಹಚ್ಚಿ ಆಕೆ ಟ್ವಿಟರ್ನಲ್ಲಿ ಹೇಳಿ, ಎಲ್ಲಾ ಪಡ್ಡೆ ಹೈಕಳ ನಿದ್ದೆಯನ್ನು ಒಂದೆರಡು ದಿನ ಹಾಳುಗೆಡವಿದ್ದಾಳೆ.