ರಿಕಿ ಜೀವನಚರಿತ್ರೆಗೆ ಬೇಡಿಕೆ
ಮಂಕಿಗೇಟ್ ಪ್ರಕರಣದಂಥ ವಿವಾದಿತ ಸಂಗತಿಗಳನ್ನೊಳಗೊಂಡ ರಿಕಿ ಪಾಂಟಿಂಗ್‌ನ ಜೀವನಚರಿತ್ರೆ 'ಎಟ್ ದಿ ಕ್ಲೋಸ್ ಆಫ್ ಪ್ಲೇ' ಪುಸ್ತಕಕ್ಕೆ ವ್ಯಾಪಕ ಬೇಡಿಕೆ ಸೃಷ್ಟಿಯಾಗಿದೆ. ..
ಮಂಕಿಗೇಟ್ ಪ್ರಕರಣದಂಥ ವಿವಾದಿತ ಸಂಗತಿಗಳನ್ನೊಳಗೊಂಡ ರಿಕಿ ಪಾಂಟಿಂಗ್‌ನ ಜೀವನಚರಿತ್ರೆ 'ಎಟ್ ದಿ ಕ್ಲೋಸ್ ಆಫ್ ಪ್ಲೇ' ಪುಸ್ತಕಕ್ಕೆ ವ್ಯಾಪಕ ಬೇಡಿಕೆ ಸೃಷ್ಟಿಯಾಗಿದೆ. ಮುಂಗಡ ಬುಕ್ಕಾಗಿದ್ದ 75 ಸಾವಿರ ಪ್ರತಿಗಳನ್ನು ಹಾರ್ಪರ್ ಕಾಲಿನ್ಸ್ ಪಬ್ಲಿಕೇಶನ್ ಜಗತ್ತಿನ ಎಲ್ಲ ಸ್ಟೋರ್‌ಗಳಿಗೂ, ಆನ್‌ಲೈನ್ ಗ್ರಾಹಕರಿಗೂ ಕಳುಹಿಸಿಕೊಟ್ಟಿದ್ದಾರೆ. ಈ ಹಿಂದೆ ಆಸ್ಟ್ರೇಲಿಯ ಮಾಜಿ ಪ್ರಧಾನಿಯೊಬ್ಬರ ಜೀವನ ಚರಿತ್ರೆಯ 15 ಸಾವಿರ ಪ್ರತಿಗಳು ಮುಂಗಡ ಬುಕ್ಕಾಗಿ ದಾಖಲೆಯಾಗಿತ್ತು. ಸದ್ಯ ಆ ದಾಖಲೆಯನ್ನು ಪಾಂಟಿಂಗ್‌ನ ಈ ಪುಸ್ತಕ ಪುಡಿಗಟ್ಟಿದೆ. ಅಂದಹಾಗೆ, ಈ ಕೃತಿ ಹಿಂದಿಗೂ ತರ್ಜುಮೆಗೊಳ್ಳಲಿದೆಯಂತೆ.