ಮಸ್ಸಾ ಮದುವೆ ನಿಜ್ವಾಗ್ಲೂ ಆಯ್ತುಂತೆ!
ತೀರಾ ಒತ್ತಡಗಳು ಕೇಳಿಬಂದ ಹಿನ್ನೆಲೆಯಲ್ಲಿ, ಫಾರ್ಮುಲಾ ಒನ್ ಕ್ರೀಡಾಳು ಫೆಲಿಪೆ ಮಸ್ಸಾ ಅವರು ತಮ್ಮ ದೀರ್ಘಕಾಲದ ಪ್ರೇಯಸಿ ರಾಫೆಲಾ ಬಸ್ಸಿ ಅವರನ್ನು ಮದುವೆಯಾಗಿದ್ದಾರೆ. ಅರೆರೆ! ಅವರಿಬ್ಬರ ಮದುವೆ ಆಗ್ಲೇ ಆದಂಗಿತ್ತಲ್ಲ ಅಂತ ನಿಮಗನ್ನಿಸಬಹುದು. ಆದರೆ, ಇದು ಅಫಿಷಿಯಲ್ ಮದುವೆ. ಅಂದರೆ, 'ನಾವು ಮದುವೆಯಾಗಿದ್ದೇವೆ' ಎಂದು ಅವರೇ ಘೋಷಿಸಿಕೊಂಡಿರುವ ಮದುವೆ. ಇದಕ್ಕಾಗಿ, ಮಸ್ಸಾ ಸ್ನೇಹಿತರಿಗೆ, ಹಿತೈಷಿಗಳಿಗೆ ಪಾರ್ಟಿ ಏರ್ಪಡಿಸಿದ್ದರಂತೆ. ಹೀಗಾಗಿಯೇ, ಎಲ್ಲರಿಗೂ ಈ ಮದುವೆ ಅಧಿಕೃತ ಎಂದು ಕರೆಯುವಂತಾಗಿದೆ. ಇತ್ತೀಚೆಗೆ ಅವರು ಮದ್ವೆಯಾಗಿದ್ದಾರೆ ಎಂದು ಹೇಳಲಾಗಿತ್ತಾದರೂ, ಇಬ್ಬರೂ ಬೇರೆ ಬೇರೆಯೇ ವಾಸವಾಗಿದ್ದರಲ್ಲದೆ, ಆಗಾಗ ಒಟ್ಟಿಗೇ ಡೇಟಿಂಗ್ಗಾಗಿ ತೆರಳುತ್ತಿದ್ದರು. ಆದ್ದರಿಂದ ಮದ್ವೆ ಸುಳ್ಳು ಅಂತೆಲ್ಲ ಸುದ್ದಿಗಳೂ ಹಬ್ಬಿದ್ದವು. ಇದೀಗ, ಎಫ್1ಗಿಂತಲೂ ಫಾಸ್ಟಾಗಿ ಸಾಗುತ್ತಿದ್ದ ಗಾಳಿ ಸುದ್ದಿಗಳಿಗೆ ಮಸ್ಸಾ ಬ್ರೇಕ್ ಹಾಕಿದ್ದಾಳೆ.