ಹರ್ಲೆ- ವಾರ್ನ್ ಡೈವೊರ್ಸ್
ಮಾಜಿ ಸ್ಪಿನ್ನರ್ ಶೇನ್ ವಾರ್ನ್ ಅವರು ತಮ್ಮ ದ್ವಿತೀಯ ಪತ್ನಿ ಎಲಿಜಬೆತ್ ಹರ್ಲೆಗೆ ಡೈವೊರ್ಸ್ ನೀಡಲು ನಿರ್ಧರಿಸಿದ್ದಾರಂತೆ. ಹಿಂಗಂತ ಒಂದು ಸುದ್ದಿ ಸದ್ಯಕ್ಕೆ ಅತ್ತ ...
ಮಾಜಿ ಸ್ಪಿನ್ನರ್ ಶೇನ್ ವಾರ್ನ್ ಅವರು ತಮ್ಮ ದ್ವಿತೀಯ ಪತ್ನಿ ಎಲಿಜಬೆತ್ ಹರ್ಲೆಗೆ ಡೈವೊರ್ಸ್ ನೀಡಲು ನಿರ್ಧರಿಸಿದ್ದಾರಂತೆ. ಹಿಂಗಂತ ಒಂದು ಸುದ್ದಿ ಸದ್ಯಕ್ಕೆ ಅತ್ತ ಮೆಲ್ಪರ್ನ್ನಲ್ಲೂ, ಅತ್ತ ಲಂಡನ್ನಲ್ಲೂ ಹರಿದಾಡುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ಅಲ್ಲಿ ಇಲ್ಲಿ ಅಡ್ಡಾಡಿಕೊಂಡಿದ್ದ ಈ ಜೋಡಿ, ಈಗ ಎರಡು ವರ್ಷಗಳಿಂದೀಚೆಗೆ ಒಟ್ಟಿಗೇ ನೆಲೆಸಲು ನಿರ್ಧರಿಸಿತ್ತು. ಆದರೆ, ಮೊದಲ ಪತ್ನಿಗೆ ಹೆದರಿ (ಆಕೆಗೂ ವಿಷಯ ಗೊತ್ತಿದೆ), ಎಲಿಜಬೆತ್ಳನ್ನು ಲಂಡನ್ನಲ್ಲಿ ಹೊಸ ಮನೆ ಖರೀದಿಸಿಟ್ಟಿದ್ದ ವಾರ್ನ್. ಈಗ, ಇಬ್ಬರ ಮಧ್ಯ ಬಿರುಕು ಬಿಡಲು ಶುರುವಾಗಿದೆಯಂತೆ. ಅದು ಡೈವೊರ್ಸ್ವರೆಗೂ ಹೋಗಿ ಮುಟ್ಟಿದೆ ಎನ್ನಲಾಗುತ್ತಿದೆ. ಆದರೆ, ಸಾವಿರ ಯುವತಿಯರ ಸರದಾರ ಎಂದು ತನ್ನನ್ನು ತಾನೇ ಬಣ್ಣಿಸಿಕೊಂಡಿದ್ದ ವಾರ್ನ್ರನ್ನು ಮೆಚ್ಚಿಕೊಂಡು ಬಂದಿದ್ದ ಹರ್ಲೆಗೆ ಹೀಗಾಗಬಾರದಿತ್ತು!