ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಐಸಿಸಿ ಸಭೆಗೆ ಶ್ರೀನಿವಾಸನ್ ಇಲ್ಲ

Rashmi Kasaragodu
Updated On : 2 Apr 2014, 1:26 am

ಜೈಪುರ: ಸುಪ್ರೀಂ ಕೋರ್ಟ್ ಎನ್.ಶ್ರೀನಿವಾಸನ್ ಅವರನ್ನು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ ಹಿನ್ನಲೆಯಲ್ಲಿ ಅವರು ಐಸಿಸಿ ಸಭೆಯಲ್ಲಿ ಭಾಗವಹಿಸಲು ಬಿಸಿಸಿಐನ ಅರ್ಹ ಪ್ರತಿನಿಧಿ ಅಲ್ಲ ಎಂದು ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಪ್ರತಿನಿಧಿ ಮೆಹ್ಬೂಬ್ ಅಬ್ದಿ ತಿಳಿಸಿದ್ದಾರೆ. ಬಿಸಿಸಿಐನ ಹಲವಾರು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಂಡಿಯಾ ಸಿಮೆಂಟ್ಸ್ ನೌಖರರನ್ನು ವಜಾ ಮಾಡುವಂತೆ ತಿಳಇಸಿದೆ. ಅದೇರೀತಿ ಶ್ರೀನಿವಾಸನ್ ಸಹ ಬಿಸಿಸಿಐನಿಂದ ಹೊರಗುಳಿದಿದ್ದು, ಅವರು ಐಸಿಸಿ ಸಭೆಯಲ್ಲಿ ಭಾಗವಹಿಸಲು ಅರ್ಹರಾಗಿಲ್ಲ ಎಂದು ಅಬ್ದಿ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ನ ನಿರ್ಧಾರದಲ್ಲೇ ಶ್ರೀನಿವಾಸನ್ ಐಸಿಸಿ ಸಭೆಯಲ್ಲಿ ಬಿಸಿಸಿಐ ಪ್ರತಿನಿಧಿಸಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement