ಚೀನಾ ಓಪನ್: ಅಡ್ವಾಣಿ, ಮೆಹ್ತಾ ಹೊರಕ್ಕೆ
ಬೀಜಿಂಗ್: ಭಾರತದ ಅಗ್ರ ಸ್ನೂಕರ್ ಆಟಗಾರರಾದ ಪಂಕಜ್ ಅಡ್ವಾಣಿ ಹಾಗೂ ಆದಿತ್ಯ ಮೆಹ್ತಾ ಚೀನಾ ಓಪನ್ ಸ್ನೂಕರ್ ಟೂರ್ನಿಯ ಮೊದಲ ಸುತ್ತಿನಲ್ಲೇ ಪರಾಭವಗೊಂಡು ನಿರಾಸೆ ಅನುಭವಿಸಿದ್ದಾರೆ.
ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಅಡ್ವಾಣಿ ತಮ್ಮ ಎದುರಾಳಿ ಇಂಗ್ಲೆಂಡ್ನ ರಿಕಿ ವಾಲ್ಡೆನ್ ವಿರುದ್ಧ 1-5 (8-81(81), 74-0, 25-83(69), 8-73, 10-72-10 42-62) ಅಂಕಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ.
ಇನ್ನು ಆದಿತ್ಯ ಮೆಹ್ತಾ ಸಹ ತಮ್ಮ ಎದುರಾಳಿ ಇಂಗ್ಲೆಂಡ್ನ ಮಾರ್ಕ್ ಕಿಂಗ್ ವಿರುದ್ಧ 4-5 (52-60, 57-52, 1-69, 79-49, 0-81(58), 62-48, 22-73, 62-40, 36-71) ಅಂಕಗಳ ಅಂತರದಲ್ಲಿ ಮುಖಭಂಗ ಅನುಭವಿಸಿದ್ದಾರೆ.
ಭಾರತದ ಈ ಇಬ್ಬರೂ ಆಟಗಾರರು ಇತ್ತೀಚೆಗೆ ಉತ್ತಮ ಫಾರ್ಮ್ನಲ್ಲಿದ್ದರು. ಆದರೆ ಈ ಪಂದ್ಯದಲ್ಲಿನ ಸೋಲು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಏ.16ರಿಂದ ಇಂಗ್ಲೆಂಡ್ನಲ್ಲಿ ವಿಶ್ವಚಾಂಪಿಯನ್ಶಿಪ್ ಆರಂಭವಾಗಲಿದ್ದು, ಈ ಚೀನಾ ಓಪನ್ ಪಂದ್ಯಾವಳಿಯು ಪೆನಾಲ್ಟಿಯಮ್ ರ್ಯಾಂಕಿಂಗ್ ಪಂದ್ಯಾವಳಿಯಾಗಿದೆ.