'ಭಾರತದ ಸ್ಪಿನ್ ದಾಳಿ ಭೇದಿಸುತ್ತೇವೆ'
ಭಾರತದ ಮಾರಕವಾದ ಸ್ಪಿನ್ ದಾಳಿಗೆ ಉತ್ತಮ ರೀತಿಯಲ್ಲಿ ಉತ್ತರ ನೀಡಲು ದಕ್ಷಿಣ ಆಫ್ರಿಕಾ ತಂಡ ಹೆಚ್ಚು ಗಮನ ಹರಿಸುತ್ತಿದ್ದು, ರಣತಂತ್ರ...
ಮೀರ್ಪುರ: ಭಾರತದ ಮಾರಕವಾದ ಸ್ಪಿನ್ ದಾಳಿಗೆ ಉತ್ತಮ ರೀತಿಯಲ್ಲಿ ಉತ್ತರ ನೀಡಲು ದಕ್ಷಿಣ ಆಫ್ರಿಕಾ ತಂಡ ಹೆಚ್ಚು ಗಮನ ಹರಿಸುತ್ತಿದ್ದು, ರಣತಂತ್ರ ರೂಪಿಸುತ್ತಿದ್ದೇವೆ ಎಂದು ಹರಿಣಗಳ ಬ್ಯಾಟ್ಸ್ಮನ್ ಜೆ.ಪಿ ಡುಮಿನಿ ತಿಳಿಸಿದ್ದಾರೆ.
ಪ್ರಸಕ್ತ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸಿರುವ ಆರ್.ಅಶ್ವಿನ್ ಹಾಗೂ ಅಮಿತ್ ಮಿಶ್ರಾ ಜೋಡಿಯು ಎದುರಾಳಿ ಬ್ಯಾಟ್ಸ್ಮನ್ಗಳಿಗೆ ತೀವ್ರ ಸವಾಲು ನೀಡುತ್ತಿದೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ವಿಶ್ವಕಪ್ನ ಉಪಾಂತ್ಯದಲ್ಲಿ ಮುಖಾಮುಖಿಯಾಗಲಿದ್ದು, ಪಂದ್ಯ ಏ.4ರಂದು ನಡೆಯಲಿದೆ.
ಭಾರತೀಯ ಸ್ಪಿನ್ನರ್ಗಳ ದಾಳಿಗೆ ಉತ್ತಮ ಪ್ರದರ್ಶನ ನೀಡುವುದು ದೊಡ್ಡ ಸವಾಲು. ಅವರು ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹಾಗಾಗಿ ಅವರ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಲೇಬೇಕಿದೆ. ಈ ಪಂದ್ಯ ವಿಶ್ವಕಪ್ನ ಸೆಮಿಫೈನಲ್ ಪಂದ್ಯವಾಗಿದ್ದು, ಮಹತ್ವದ ಪಂದ್ಯವಾಗಿದೆ ಎಂದು ಡುಮಿನಿ ತಿಳಿಸಿದ್ದಾರೆ.
ಡುಮಿನಿ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದು, ನೆಟ್ಸ್ನಲ್ಲಿ ಅಮಿತ್ ಮಿಶ್ರಾ ಎಸೆತವನ್ನು ಎದುರಿಸಿದ್ದಾರೆ. ಹಾಗಾಗಿ ಮಿಶ್ರಾ ಎಸೆತಗಳನ್ನು ಆಡಿದ್ದರು, ನಮ್ಮ ಮೇಲಿರುವ ಜವಾಬ್ದಾರಿ ನಿಭಾಯಿಸುವುದು ಕಷ್ಟದ ಕೆಲಸ ಎಂದಿದ್ದಾರೆ.
ಕೇವಲ ನಾನೊಬ್ಬ ಮಾತ್ರ ಅಲ್ಲ. ಇತರೆ ಆಟಗಾರರು ಭಾರತೀಯ ಸ್ಪಿನ್ನರ್ಗಳ ಎಸೆತಗಳನ್ನು ಎದುರಿಸಿದ್ದಾರೆ. ಅಮಿತ್ ಉತ್ತಮ ಫಾರ್ಮ್ನಲ್ಲಿದ್ದು, ಆತನ ಎಸೆತಗಳನ್ನು ಸ್ವಲ್ಪ ಮಟ್ಟಿಗೆ ಊಹಿಸಬಹುದು. ಹಾಗಾಗಿ ಮಿಶ್ರಾ ಬಗ್ಗೆ ಎಚ್ಚರಿಕೆವಹಿಸಿದ್ದು, ಹೆಚ್ಚಿನ ತಯಾರಿ ನಡೆಸಿ, ರಣತಂತ್ರ ರೂಪಿಸಿದ್ದೇವೆ ಎಂದು ತಿಳಿಸಿದ್ದಾರೆ.ಕಳೆದ ಕೆಲವು ಪಂದ್ಯಗಳಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಪಂದ್ಯದಲ್ಲೂ ಅದೇ ಪ್ರದರ್ಶನ ನೀಡಬೇಕಿದೆ ಎಂದರು.
ಮೀರ್ಪುರದಲ್ಲಿ ಭಾರತ ತಂಡ ಹೆಚ್ಚಿನ ಪಂದ್ಯಗಳನ್ನಾಡಿದ್ದು, ಅದರ ಗುಣಗಳನ್ನು ಚೆನ್ನಾಗಿ ಅರಿತಿರುವುದು ಭಾರತಕ್ಕೆ ಹೆಚ್ಚಿನ ಲಾಭ ನೀಡಲಿದೆ. ಆದರೆ ನಾವು ಉಪಾಂತ್ಯದ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಈ ಹಿಂದಿನ ಯಾವು ಅಂಶಗಳು ಗಣನೆಗೆ ಬರುವುದಿಲ್ಲ. ಹಾಗಾಗಿ ನಿಮ್ಮ ಕಳೆದ ಪಂದ್ಯಗಳ ಗೆಲವಿನಿಂದ ದೊರೆತ ಆತ್ಮವಿಶ್ವಾಸದಲ್ಲಿ ಕಣಕ್ಕಿಳಿಯಬೇಕಾಗಿದೆ.
ನಾವು ಪಂದ್ಯಾವಳಿಯಲ್ಲಿ ಸೋಲಿನ ಸ್ಥಿತಿಯಲ್ಲಿದ್ದರು ನಂತರ ಗೆಲವು ದಾಖಲಿಸಿದ್ದೇವೆ. ಎಂದು ಅಭಿಪ್ರಾಯಪಟ್ಟರು.