ಅಪ್ಪನಾಗುವ ಸಂಭ್ರಮದಲ್ಲಿ ಧೋನಿ
ನವದೆಹಲಿ: ಒಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಚೆನ್ನೈ ತಂಡದ ಮಾಲೀಕ ಎನ್. ಶ್ರೀನಿವಾಸನ್ ಭಾರಿ ಹಿನ್ನಡೆ ಅನುಭವಿಸಿದ್ದರೆ, ಅದೇ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸಂಭ್ರಮದಲ್ಲಿದ್ದಾರೆ. ಕಾರಣ, ಧೋನಿ ತಮ್ಮ ಮೊದಲ ಮಗುವಿನ ಆಗಮನದ ಸಂಭ್ರಮದಲ್ಲಿದ್ದಾರಂತೆ. ಇದೇ ಜುಲೈನಲ್ಲಿ ಧೋನಿ ಪತ್ನಿ ಸಾಕ್ಷಿ ಸಿಂಗ್ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ವರದಿಯಾಗಿದೆ.ಆದರೆ, ಫೆಬ್ರವರಿಯಲ್ಲಷ್ಟೇ ಭಂಗಿ ಜಂಪ್‌ನಲ್ಲಿ ಭಾಗವಹಿಸಿದ್ದ ಸಾಕ್ಷಿ ಗರ್ಭಿಣಿಯಾಗಿದ್ದಾರಾ? ಎಂಬುದು ಅಚ್ಚರಿ ಮೂಡಿಸಿದೆ.