ಇಂದಿನಿಂದ ಐಪಿಎಲ್ ಟಿಕೆಟ್ ಮಾರಾಟ
ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 7ನೇ ಆವೃತ್ತಿಯ ಆನ್ಲೈನ್ ಟಿಕೆಟ್ ಮಾರಾಟ ಬುಧವಾರದಿಂದ ಆರಂಭವಾಗಿದೆ.
ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕೆಲ ಆರಂಭದ ಕೆಲ ಪಂದ್ಯಗಳನ್ನು ದುಬೈಗೆ ಸ್ಥಳಾಂತರ ಮಾಡಲಾಗಿದೆ. ಆ ಪಂದ್ಯಗಳ ಟಿಕೆಟ್ಗಳನ್ನು ಮಾತ್ರ ಈಗ ಮಾರಾಟ ಮಾಡಲಾಗುತ್ತಿದೆ. www.iplt20.com ಮತ್ತು www.ticketmaster.ae ವೆಬ್ಸೈಟ್ಗಳಲ್ಲಿ ಟಿಕೆಟ್ ಮಾರಾಟ ಮಾಡಲಾಗುತ್ತಿದೆ.