ಪಳ್ಳಿಕಲ್‌ಗೆ ಹಿಂಬಡ್ತಿ
ನವದೆಹಲಿ: ಭಾರತದ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರು ವಿಶ್ವ ಸ್ಕ್ವಾಷ್‌ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಒಂದು ಸ್ಥಾನ ಹಿಂಬಡ್ತಿ ಪಡೆದಿದ್ದಾರೆ.
ಈಗ ದೀಪಿಕಾ 12ನೇ ಸ್ಥಾನದಲ್ಲಿದ್ದರೆ, ಮಲೇಷ್ಯಾದ ಸ್ಕ್ವಾಷ್ ದಂತಕತೆ ನಿಕೋಲ್ ಡೇವಿಡ್ ಅವರು ಅಗ್ರಸ್ಥಾನ ಮರಳಿ ಪಡೆದಿದ್ದಾರೆ.ದೀಪಿಕಾ ಒಂದು ಸ್ಥಾನ ಹಿಂಬಡ್ತಿ ಪಡೆದರೂ, ಅಗ್ರಸ್ಥಾನಕ್ಕೆ ಪಡೆದಿರುವ ಭಾರತದ ಸ್ಕ್ವಾಷ್ ತಾರೆ ಎನಿಸಿದ್ದಾರೆ. ಕಳೆದ ತಿಂಗಳು ನಡೆದ ವಿಶ್ವ ಚಾಂಪಿಯನ್‌ಶಿಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಅನಿರೀಕ್ಷಿತವಾಗಿ ಸೋಲನುಭವಿಸಿದ್ದರೂ, ಡೇವಿಡ್ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ.