ನಾಯಕತ್ವ ತ್ಯಜಿಸಿದ ಹಫೀಜ್
ಕರಾಚಿ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯಾವಳಿಯ ಲೀಗ್ ಹಂತದಲ್ಲೇ ಸೋಲನುಭವಿಸಿ ತವರನ್ನು ಸೇರಿರುವ ಪಾಕಿಸ್ತಾನ ತಂಡದ ನಾಯಕ ಮೊಹ್ಮದ್ ಹಫೀಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದರೊಂದಿಗೆ ಏಕದಿನ ಕ್ರಿಕೆಟ್ ತಂಡದಲ್ಲಿ ತಾವು ಹೊಂದಿದ್ದ ಉಪನಾಯಕ ಸ್ಥಾನಕ್ಕೂ ಹಫೀಜ್ ರಾಜೀನಾಮೆ ನೀಡಿದ್ದಾರೆ. 2012ರಲ್ಲಿ ಹಫೀಜ್ ಪಾಕಿಸ್ತಾನ ಟಿ20 ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು.