ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮಳೆ ಅಡಚಣೆ ಲಂಕೆ ಕೈ ಮೇಲು

Rashmi Kasaragodu
Updated On : 4 Apr 2014, 1:36 am

ಮೀರ್ಪುರ: ಧಾರಾಕಾರ ಮಳೆ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ ವಿಶ್ವಕಪ್ ಟಿ-20 ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದ ಹೋರಾಟಕ್ಕೆ ಅಡ್ಡಿ ಪಡಿಸಿದೆ. ಆದರೆ ಡಕ್ವರ್ತ್ ಲೂಯಿಸ್ ನಿಯಮದನ್ವಯ ಮಳೆ ನಿಂತಾಗ ಶ್ರೀಲಂಕಾ 27 ರನ್ ಹೆಚ್ಚಿಗೆ ಸಂಪಾದಿಸಿದೆ. ಹಾಗಾಗಿ ಪಂದ್ಯ ಮುಂದುವರಿಯದಿದ್ದರೆ, ಶ್ರೀಲಂಕಾ ಫೈನಲ್ ತಲುಪುವುದು ಖಚಿತ.
ಶೇರೇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಗೆಲ್ಲಲು 161ರ ಗುರಿಯತ್ತ ಸಾಗಲು ಹೋರಾಟ ನಡೆಸಿದ್ದ ವಿಂಡೀಸ್, 13.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿದಾಗ ಧಾರಾಕಾರ ಮಳೆ ಸುರಿದು ಆಟವನ್ನು ನಿಲ್ಲಿಸಿತು.
ಆರಂಭಿಕರಾಗಿ ಕಣಕ್ಕಿಳಿದ ಡ್ವೈನ್ ಸ್ಮಿತ್ (17), ಕ್ರಿಸ್ ಗೇಯ್ಲ್ (3) 25 ರನ್ಗಳ ಆರಂಭ ನೀಡಿ ಪೆವಿಲಿಯನ್ ಸೇರಿಕೊಂಡರು. ಮೂರನೇ ಕ್ರಮಾಂಕದಲ್ಲಿ ಬಂದ ಸಿಮನ್ಸ್(4) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹಾಗಾಗಿ ತಂಡ ತೀವ್ರ ಸಂಕಷ್ಟಕ್ಕೆ ಸಿಲುಕಿತು. ನಂತರ ಡ್ವೈನ್ ಬ್ರಾವೊ(30) ಸ್ಫೋಟಕ ಬ್ಯಾಟಿಂಗ್ ನಡೆಸಿದರಾದರೂ ಕುಲಶೇಖರ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ವಿಂಡೀಸ್ಗೆ 37 ಎಸೆತಗಳಲ್ಲಿ 81 ರನ್ ಬೇಕಾಗಿತ್ತಾದರೂ, ಕ್ರೀಸ್ನಲ್ಲಿ ಸ್ಯಾಮ್ಯುಯೆಲ್ಸ್ ಹಾಗೂ ಸಾಮಿ ಉಪಸ್ಥಿತಿ ತಂಡದ ಗೆಲವಿನ ಆಸೆ ಜೀವಂತವಾಗಿರಿಸಿತ್ತು. ಆದರೆ ಸುರಿದ ಮಳೆ ವಿಂಡೀಸ್ ಆಸೆಗೆ ತಣ್ಣೀರೆರೆಚಿತು.
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಶ್ರೀಲಂಕಾ ತಂಡ 20 ಓವರ್ಗಳಲ್ಲಿ 6 ವಿಕೆಟ್ಗೆ 160 ರನ್ ಕಲೆ ಹಾಕಿತು.
ಸ್ಫೋಟಕ ಆರಂಭ: ಮೊದಲು ಬ್ಯಾಟಿಂಗ್ ಮಾಡಲಿಳಿದ ಶ್ರೀಲಂಕಾ ತಂಡಕ್ಕೆ ಆರಂಭಿಕರಿಂದ ಅಬ್ಬರದ ಆರಂಭ ದೊರೆಯಿತು. ಆರಂಭಿಕರಾಗಿ ಕಣಕ್ಕಿಳಿದ ಕುಶಾಲ ಪೆರೇರಾ(26) ಹಾಗೂ ತಿಲಕರತ್ನೆ ದಿಲ್ಷಾನ್(39) 41 ರಹನ್ಗಳ ಜತೆಯಾಟ ನೀಡಿತು.
ಆರಂಭದಲ್ಲೇ ವಿಂಡೀಸ್ ಬೌಲರ್ಗಳನ್ನು ಕಾಡಿದ ಈ ಇಬ್ಬರು ಬ್ಯಾಟ್ಸ್ಮನ್ಗಳು ಕೇವಲ 4 ಓವರ್ಗಳಲ್ಲಿ ತಂಡದ ಮೊತ್ತವನ್ನು 41ಕ್ಕೆ ಏರಿಸಿತು. ಈ ವೇಳೆ 12 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ಗಳ ನೆರವಿನಿಂದ 26 ರನ್ ದಾಖಲಿಸಿದ್ದ ಪೆರೇರಾ ಪೆವಿಲಿಯನ್ ಸೇರಿಕೊಂಡರು.
ದಿಢೀರ್ ಕುಸಿತ: ಕುಶಾಲ ಪೆರೇರಾ ವಿಕೆಟ್ ಕಳೆದುಕೊಂಡ ನಂತರ ಪಂದ್ಯದ ಚಿತ್ರಣವೇ ಬದಲಾಯಿತು. ದಿಲ್ಷಾನ್ 39 ರನ್ ಗಳಿಸಿದ್ದು ಬಿಟ್ಟರೆ, ನಂತರ ಬಂದ ಜಯವರ್ದನೆ 0, ಸಂಗಕ್ಕಾರ 1ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಈ ವೇಳೆ ಲಂಕಾ ರನ್ ವೇಗಕ್ಕೆ ವಿಂಡೀಸ್ ಬೌಲರ್ಗಳು ಬ್ರೇಕ್ ಹಾಗಿದರು.
ಆದರೆ ಅಂತಿಮ ಕ್ಷಣದಲ್ಲಿ ತಿರಿಮಾನೆ 44 ಹಾಗೂ ಮ್ಯಾಥ್ಯೂಸ್ 40 ಅವರ ಜವಾಬ್ದಾರಿಯುತ ಬ್ಯಾಟಿಂಗ್ನಿಂದ ಸವಾಲಿನ ಮೊತ್ತ ಕಲೆ ಹಾಕಿತು.



ಸ್ಕೋರ್ ವಿವರ



ಶ್ರೀಲಂಕಾ 20 ಓವರ್ಗಳಲ್ಲಿ 6 ವಿಕೆಟ್ಗೆ 160

ಕುಶಾಲ ಪೆರೇರಾ ಬಿ ಸ್ಯಾಂಟೋಕಿ 26 (12), ದಿಲ್ಷಾನ್ ರನೌಟ್(ಸಿಮನ್ಸ್) 39 (39), ಜಯವರ್ದನೆ ರನೌಟ್ (ಸಾಮಿ/ರಾಮ್ದಿನ್) 0 (0), ಸಂಗಕ್ಕಾರ ಸಿ ಮತ್ತು ಬಿ ಬದ್ರಿ 1 (6), ತಿರಿಮಾನೆ ಸಿ ಸಿಮನ್ಸ್ ಬಿ ಸ್ಯಾಂಟೋಕಿ 44 (35), ಮ್ಯಾಥ್ಯೂಸ್ ಸಿ ಬ್ರಾವೊ ಬಿ ರಸ್ಸೆಲ್ 40 (23), ಪ್ರಸನ್ನ ಅಜೇಯ 6 (5).
ಇತರೆ: (ಎಲ್ಬಿ 2, ವೈಡ್ 2) ಒಟ್ಟು 4
ವಿಕೆಟ್ ಪತನ: 1-41, 2-41, 3-49, 4-91, 5-121, 6-160
ಬೌಲಿಂಗ್ ವಿವರ:
ಸ್ಯಾಮುಯಲ್ ಬದ್ರಿ 4-0-23-1, ಕಿಷ್ಮಾರ್ ಸ್ಯಾಂಟೋಕಿ 4-0-46-2, ಸುನಿಲ್ ನಾರಾಯಣ್ 4-0-20-0, ಸ್ಯಾಮ್ಯುಯೆಲ್ಸ್ 4-0-23-0, ರಸ್ಸೆಲ್ 3-0-37-1, ಗೇಯ್ಲ್ 1-0-9-0    
ವೆಸ್ಟ್ ಇಂಡೀಸ್ 13.5 ಓವರ್ಗಳಲ್ಲಿ 4 ವಿಕೆಟ್ಗೆ 80
ಡ್ವೈನ್ ಸ್ಮಿತ್ ಬಿ ಮಾಲಿಂಗ 17(14), ಕ್ರಿಸ್ ಗೇಯ್ಲ್ ಬಿ ಮಾಲಿಂಗ 3(13), ಸಿಮನ್ಸ್ ಎಲ್ಬಿ ಪ್ರಸನ್ನ 4(8), ಸ್ಯಾಮ್ಯುಯೆಲ್ಸ್ ಅಜೇಯ 18(29), ಬ್ರಾವೊ ಸಿ ಜಯವರ್ದನೆ ಬಿ ಕುಲಶೇಖರ 30(19)
ಸಾಮಿ ಅಜೇಯ 0(0), ಇತರೆ (ಎಲ್ಬಿ 1, ವೈಡ್ 7)
ವಿಕೆಟ್ ಪತನ: 1-25, 2-28,  3-49, 4-91, 5-121, 6-160
ಬೌಲಿಂಗ್ ವಿವರ:
ನುವಾನ್ ಕುಲಶೇಖರ 2.5-0-22-1, ಸಚಿತ್ರ ಸೇನನಾಯಕೆ 2-0-6-0, ಲಸಿತ್ ಮಾಲಿಂಗ 2-0-5-2, ರಂಗನ ಹೆರಾತ್ 4-0-27-0,  ಸಿಕ್ಕುಗೆ ಪ್ರಸನ್ನ 2-0-15-1, ಆ್ಯಂಜಿಲೋ ಮ್ಯಾಥ್ಯೂಸ್ 1-0-4-0

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement