ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮೇ 2ರಿಂದ ಭಾರತದಲ್ಲಿ ಐಪಿಎಲ್

Rashmi Kasaragodu
Updated On : 4 Apr 2014, 1:32 am

ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ 7ನೇ ಆವೃತ್ತಿಯ ಪಂದ್ಯಗಳು ಮೇ.2ರಿಂದ ಭಾರತದಲ್ಲೇ ನಡೆಯಲಿದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಐಪಿಎಲ್ 7ನೇ ಆವೃತ್ತಿಯನ್ನು ಮೂರು ಹಂತದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಮೊದಲ ಹಂತದ ಪಂದ್ಯಗಳು ಯುಎಇಗೆ ಸ್ಥಳಾಂತರವಾಗಿದ್ದು, ನಂತರದ ಎರಡು ಹಂತಗಳನ್ನು ಭಾರತದಲ್ಲೇ ನಡೆಸಲು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಿದೆ. ಈ ಮೂಲಕ ಮೇ.2ರಿಂದ ಈ ಪಂದ್ಯಾವಳಿ ಭಾರತಕ್ಕೆ ಮರಳಲಿದೆ. ಐಪಿಎಲ್ ಆಡಳಿತ ಮಂಡಳಿ ಗುರುವಾರ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ರಾಂಚಿ, ಮುಂಬೈ, ನವದೆಹಲಿ, ಬೆಂಗಳೂರು, ಅಹ್ಮದಬಾದ್, ಕಟಕ್, ಹೈದರಾಬಾದ್, ಕೋಲ್ಕತಾ, ಚೆನ್ನೈ ಹಾಗೂ ಮೊಹಾಲಿಯಲ್ಲಿ ಒಟ್ಟು 10 ನಗರಗಳಲ್ಲಿ 40 ಪಂದ್ಯಗಳು ನಡೆಯಲಿವೆ.
ಕ್ವಾಲಿಫೈಯರ್ 1 ಹಾಗೂ ಎಲಿಮಿನೇಟರ್ ಪಂದ್ಯ ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಕ್ರಮವಾಗಿ ಮೇ 27 ಹಾಗೂ ಮೇ 28ರಂದು ನಡೆಯಲಿದೆ. ಇನ್ನು ಕ್ವಾಲಿಫೈಯರ್2 ಹಾಗೂ ಫೈನಲ್ ಪಂದ್ಯಗಳು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕ್ರಮವಾಗಿ ಮೇ 30 ಹಾಗೂ ಜೂ.1ರಂದು ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement