ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಗೆದ್ದ ಸೋಮ್, ಬಿದ್ದ ಸನಮ್

Rashmi Kasaragodu
Updated On : 5 Apr 2014, 1:26 am

ಬೂಸಾನ್ (ಕೊರಿಯಾ): ನಿರೀಕ್ಷೆಯಂತೆ ಸೋಮದೇವ್ ದೇವವರ್ಮನ್ ಮೊದಲ ಸಿಂಗಲ್ಸ್ ಗೆದ್ದು ತವರಿಗೆ ನಿರಾಸೆ ಉಂಟುಮಾಡಲಿಲ್ಲ.  ಆದರೆ, ಸನಮ್ ಸಿಂಗ್ 2ನೇ ಸಿಂಗಲ್ಸ್ ಸೆಣಸಿನಲ್ಲಿ ಸೋಲನುಭವಿಸಿದ್ದರಿಂದ ದಕ್ಷಿಣ ಕೊರಿಯಾ ಮೇಲೆ ಮೊದಲ ದಿನ ಮೇಲುಗೈ ಸಾಧಿಸಲಾಗಲಿಲ್ಲ.      ಬೂಸಾನ್ನಲ್ಲಿ ಶುಕ್ರವಾರ ಆರಂಭವಾದ ಡೇವಿಸ್ ಕಪ್ ಏಷಿಯಾ-ಓಶೆನಿಯಾ ಗುಂಪು-1ರ ಎರಡನೇ ಸುತ್ತಿನ ಮುಖಾಬಲದಲ್ಲಿ ಭಾರತ ಮತ್ತು ಕೊರಿಯಾ ಮೊದಲ ದಿನ 1-1ರಿಂದ ಸಮಗೌರವಕ್ಕೆ ತೃಪ್ತಿ ಹೊಂದಿವೆ.
ವಿಶ್ವದ 88ನೇ ಕ್ರಮಾಂಕದ ಆಟಗಾರ ಸೋಮದೇವ್ ದೇವವರ್ಮನ್ ಮೊದಲ ಸಿಂಗಲ್ಸ್ ಪಂದ್ಯದಲ್ಲಿಂದು 7-6 (7-4), 7-6 (7-3), 6-4 ಸೆಟ್ಗಳಿಂದ ಚಂಗ್ ಹ್ಯೂಯಾನ್ ವಿರುದ್ಧ ಗೆಲವು ದಾಖಲಿಸಿದರು.
ತಮೂರು ಗಂಟೆ 30 ನಿಮಿಷಗಳ ಸುದೀರ್ಘ ಕಾಳಗದಲ್ಲಿ ಯಾವುದೇ ಹಂತದಲ್ಲೂ ಎದೆಗುಂದದ ಸೋಮದೇವ್ ಕೊನೆಯವರೆಗೂ ಪರಿಣಾಮಕಾರಿ ಹೋರಾಟ ಸಂಘಟಿಸಿ ಯಶಸ್ವಿಯಾದರು.
ನಂತರ ನಡೆದ ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಸನಮ್ ಸಿಂಗ್ ಮೇಲೂ ಭಾರತ ಉತ್ತಮ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ, ಕೊರಿಯಾದ ನಂಬರ್ ಓನ್ ಆಟಗಾರ ಲಿಮ್ ಯಂಗ್-ಕ್ಯು ವಿರುದ್ಧ ಉತ್ತಮ ಹೋರಾಟ ನಡೆಸಿದರೂ ಸಹ ಗೆಲವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಎರಡು ಗಂಟೆ 45 ನಿಮಿಷಗಳ ರೋಚಕ ಪೈಪೋಟಿಯಲ್ಲಿ ಭಾರತೀಯ ಆಟಗಾರ 6-7 (5-7), 4-6, 4-6 ಸೆಟ್ಗಳಿಂದ ಕೊರಿಯಾ ಆಟಗಾರನಿಗೆ ತಲೆಬಾಗಿಸಿದ.
ಶನಿವಾರ ಡಬಲ್ಸ್ ಪಂದ್ಯ ನಡೆಯಲಿದ್ದು ಭಾರತದ ರೋಹನ್ ಬೋಪಣ್ಣ ಮತ್ತು ಸಾಕೇತ್ ಮೈನೇನಿ ಅವರು  ಲೀ ಹ್ಯೂಂಗ್-ಟೇಕ್ ಮತ್ತು ಸಾಂಗ್ ವೂ ನೊಹ್ ಅವರ ಸವಾಲು ಎದುರಿಸಲಿದ್ದಾರೆ. ಇಲ್ಲಿ ಗೆಲವು ದಾಖಲಿಸುವ ಮೂಲಕ ಪಂದ್ಯದಲ್ಲಿ 2-1ರಿಂದ ಮುನ್ನಡೆ ಸಾಧಿಸುವ ಲೆಕ್ಕಾಚಾರದಲ್ಲಿ ಉಭಯ ಜೊತೆಗಾರರಿದ್ದಾರೆ.
ಇಂದು ಡಬಲ್ಸ್ ಪಂದ್ಯ:
ರೋಹನ್ ಬೋಪಣ್ಣ-ಸಾಕೇತ್ ಮೈನೇನಿ ವಿರುದ್ಧ ಲೀ ಹ್ಯೂಂಗ್-ಟೇಕ್-ಸಾಂಗ್ ವೂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement