'ಪ್ರಜ್ಞಾವಸ್ಥೆಗೆ ಶುಮಾಕರ್'
ಗ್ರೆನೋಬಲ್ (ಫ್ರಾನ್ಸ್): ಸ್ಕೀಯಿಂಗ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕೋಮಾ ಸೇರಿದ್ದ ಖ್ಯಾತ ಮಾಜಿ ಎಫ್ 1 ಚಾಲಕ ಮೈಕೆಲ್ ಶುಮಾಕರ್, ಪ್ರಜ್ಞಾವಸ್ಥೆಗೆ ಮರಳಿದ್ದು ಎಚ್ಚರಗೊಳ್ಳುತ್ತಿದ್ದಾರೆ ಎಂದು ಅವರ ವಕ್ತಾರ ಶುಕ್ರವಾರ ತಿಳಿಸಿದ್ದಾರೆ.
ಕಳೆದ ಡಿಸೆಂಬರ್ 29ರಂದು ನಡೆದ ಅಪಘಾತದಲ್ಲಿ ಶುಮಾಕರ್ ತಲೆ ಕಲ್ಲಿನ ಬಂಡೆಗೆ ಬಡಿದು ಮೆದುಳಿಗೆ ತೀವ್ರವಾದ ಹೊಡೆತ ಬಿದ್ದಿತ್ತು. ಹೀಗಾಗಿ ಅವರನ್ನು ವೈದ್ಯರು ಕೋಮಾದಲ್ಲಿರಿಸಿದ್ದರು. ಈಗ ಶುಮಾಕರ್ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ ಎನ್ನಲಾಗುತ್ತಿದೆ.
'ಮೈಕೆಲ್ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಪ್ರಜ್ಞಾವಸ್ಥೆಗೆ ಮರಳಿರುವ ಸಂಜ್ಞೆ ಕಂಡುಬಂದಿದ್ದು, ಎಚ್ಚರಗೊಳ್ಳುತ್ತಿದ್ದಾರೆ' ಎಂದು ಶುಮಾಕರ್ ಮಹಿಳಾ ವಕ್ತಾರ ಸಬಿನೆ ಕೆಹ್ಮ್ ಅವರು ತಿಳಿಸಿದ್ದಾರೆ.