ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮುಗ್ಗರಿಸಿದ ಸೈನಾ, ಕಶ್ಯಪ್

ಭಾರತದ ಬ್ಯಾಡ್ಮಿಂಟನ್ತಾರೆಗಳಾದ ಸೈನಾ ನೆಹ್ವಾಲ್ ಮತ್ತುಪಿ.ಕಶ್ಯಪ್ ಇಂಡಿಯಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ...

Rashmi Kasaragodu
Updated On : 5 Apr 2014, 1:26 am

ನವದೆಹಲಿ: ಭಾರತದ ಬ್ಯಾಡ್ಮಿಂಟನ್ತಾರೆಗಳಾದ ಸೈನಾ ನೆಹ್ವಾಲ್ ಮತ್ತುಪಿ.ಕಶ್ಯಪ್ ಇಂಡಿಯಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಕ್ವಾರ್ಟರ್ಫೈನಲ್ನಲ್ಲಿ ಸೋಲನುಭವಿಸಿದ್ದಾರೆ.
ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಎಂಟರಘಟ್ಟದ ಪಂದ್ಯದಲ್ಲಿ ಸೈನಾ ನೆಹ್ವಾಲ್ ತಮ್ಮ ಎದುರಾಳಿ ವಿಶ್ವದ ಎರಡನೇ ರ್ಯಾಂಕಿಂಗ್ನ ಯಿಹಾನ್ ವಾಂಗ್ ವಿರುದ್ಧ 16-21, 14-21 ನೇರ ಸೆಟ್ಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ. ಈ ಮೂಲಕ ಸೈನಾ ನೆಹ್ವಾಲ್ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.
ಕೇವಲ 39 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಯಿಹಾನ್, ಸೈನಾ ವಿರುದ್ಧ ಸಂಪೂರ್ಣ ಪ್ರಾಬಲ್ಯ ಮೆರೆದರು. ಈ ಮೂಲಕ ಸೈನಾ ಎಂಟನೇ ಬಾರಿಗೆ ಚೀನಾದ ಆಟಗಾರ್ತಿ ವಿರುದ್ಧ ಸೋಲನುಭವಿಸಿದಂತಾಗಿದೆ.  ಪಂದ್ಯದ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ ಯಿಹಾನ್ ಮೊದಲ ಸೆಟ್ನಲ್ಲಿ 21-16 ಅಂತರದಲ್ಲಿ ಮುನ್ನಡೆ ಪಡೆದರು. ನಂತರ ಎರಡನೇ ಸೆಟ್ನಲ್ಲೂ ಅದೇ ಪ್ರದರ್ಶನ ಮುಂದುವರಿಸಿದ ಯಿಹಾನ್ 21-14 ಅಂತರದ ಮುನ್ನಡೆ ಕಾಯ್ದುಕೊಂಡು ಗೆಲವಿನ ನಗೆ ಬೀರಿದರು. ಈ ಮೂಲಕ ಯಿಹಾನ್ ಉಪಾಂತ್ಯಕ್ಕೆ ಪ್ರವೇಶಿಸಿದರು.
ಕಶ್ಯಪ್ ಕಂಗಾಲು: ಇನ್ನು ಭಾರತದ ಪುರುಷರ ಸಿಂಗಲ್ಸ್ ತಾರೆ ಪಿ. ಕಶ್ಯಪ್ ಸಹ ಎಂಟರ ಘಟ್ಟದಲ್ಲಿ ಸೋಲನುಭವಿಸಿ ನಿರಾಸೆ ಮೂಡಿಸಿದ್ದಾರೆ. ಕಶ್ಯಪ್ ತಮ್ಮ ಎದುರಾಳಿ ಲೀ ಚಾಂಗ್ ವಿರುದ್ಧ 21-15, 21-13 ನೇರ ಸೆಟ್ಗಳ ಅಂತರದಲ್ಲಿ ಮುಖಭಂಗ ಅನುಭವಿಸಿದ್ದಾರೆ.
ಆರಂಭದಿಂದಲೂ ಲೀ ಚಾಂಗ್ ವಿರುದ್ಧ ಹೋರಾಟ ನೀಡಲು ಪ್ರಯತ್ನಿಸಿದ ಕಶ್ಯಪ್, ಪಂದ್ಯದಲ್ಲಿ ನಿಯಂತ್ರಣ ಪಡೆದುಕೊಳ್ಳಲಿಲ್ಲ. ಪಂದ್ಯದ ಮೊದಲ ಸೆಟ್ನಲ್ಲಿ 15-21ರ ಹಿನ್ನಡೆ ಅನುಭವಿಸಿದ ಕಶ್ಯಪ್, ತೀವ್ರ ಒತ್ತಡಕ್ಕೆ ಸಿಲುಕಿದರು. ಎರಡನೇ ಸೆಟ್ನಲ್ಲಿ ಲೀ ಚಾಂಗ್ ಮತ್ತಷ್ಟು ಆಕ್ರಮಣಕಾರಿ ಆಟ ಪ್ರದರ್ಶಿಸಿ ಕಶ್ಯಪ್ ವಿರುದ್ಧ ಪಾರಮ್ಯ ಮೆರೆದರು. ಹಾಗಾಗಿ 13-21 ಅಂತರದ ಹಿನ್ನಡೆ ಅನುಭವಿಸಿದ ಕಶ್ಯಪ್, ಲೀ ಚಾಂಗ್ಗೆ ಮಣಿದರು.
ಈ ಮೂಲಕ ಭಾರತದ ಇಬ್ಬರೂ ಪ್ರಮುಖರು ಪಂದ್ಯಾವಳಿಯಿಂದ ಹೊರಗುಳಿದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement