ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಅಶ್ವಿನ್ ಎಸೆತಕ್ಕೆ ಗಿಲ್‌ಕ್ರಿಸ್ಟ್ ಫಿದಾ

Mainashree
Updated On : 5 Apr 2014, 10:50 am

ಮೀರ್‌ಪುರ: ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ಆರ್.ಅಶ್ವಿನ್ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಹಶೀಂ ಆಮ್ಲಾ ಅವರನ್ನು ಬೌಲ್ಡ್ ಮಾಡಿದ ಎಸೆತವನ್ನು ಆಸ್ಟ್ರೇಲಿಯಾದ ಮಾಜಿ ಆಟಗಾರ ಆ್ಯಡಮ್ ಗಿಲ್‌ಕ್ರಿಸ್ಟ್ 'ಶತಮಾನದ ಟಿ20 ಎಸೆತ' ಎಂದು ಹೊಗಳಿದ್ದಾರೆ.ಶುಕ್ರವಾರ ನಡೆದ ಪಂದ್ಯದಲ್ಲಿ ಆರ್.ಅಶ್ವಿನ್, ಆಮ್ಲಾ ಅವರನ್ನು ತಮ್ಮ ಕ್ಯಾರಮ್ ಎಸೆತದಿಂದ ಬೌಲ್ಡ್ ಮಾಡಿದ್ದು, ಚೆಂಡು ತಿರುವು ಪಡೆದ ರೀತಿ ಅತ್ಯುತ್ತಮವಾಗಿತ್ತು. ಲೆಗ್ ಸ್ಟಂಪ್ ಆಚೆಗಿನ ಲೈನ್‌ನಲ್ಲಿ ಬಿದ್ದ ಚೆಂಡು ತಿರುವು ಪಡೆದು, ಆಮ್ಲಾ ಅವರ ಆಫ್ ಸ್ಟಂಪ್‌ಗೆ ಬಡಿಯಿತು. ಚೆಂಡು ಪಿಚ್ ಆದಾಗ ಡಿಫೆನ್ಸ್ ಮಾಡಲು ಮುಂದಾದ ಆಮ್ಲಾ ಸ್ಪಿನ್ ಮೋಡಿ ಅರಿಯದೇ ಬೌಲ್ಡ್ ಆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement