ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಆಸೀಸ್ ವನಿತೆಯರ ಮುಡಿಗೆ ಗರಿ

ಆಸ್ಟ್ರೇಲಿಯಾ ವನಿತೆಯರು 2013-14ನೇ ಸಾಲಿನ ಮಹಿಳಾ ವಿಶ್ವಕಪ್ ಟಿ-20 ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ...

Mainashree
Updated On : 7 Apr 2014, 2:20 am

ಮೀರ್‌ಪುರ: ಆಸ್ಟ್ರೇಲಿಯಾ ವನಿತೆಯರು 2013-14ನೇ ಸಾಲಿನ ಮಹಿಳಾ ವಿಶ್ವಕಪ್ ಟಿ-20 ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ತಮ್ಮ ಮುಡಿಯಲ್ಲಿ ಸತತ ಮೂರನೇ ಬಾರಿಗೆ ವಿಶ್ವಕಪ್ ಟಿ-20 ಕಿರೀಟ ತುಂಬಿಕೊಳ್ಳುವುದರೊಂದಿಗೆ ಹ್ಯಾಟ್ರಿಕ್ ಸಾಧನೆಯೊಂದಿಗೆ ವಿಶ್ವ ಕ್ರಿಕೆಟ್‌ನಲ್ಲಿ ಮತ್ತೆ ತಮ್ಮ ಪಾರುಪತ್ಯ ಮುಂದುವರಿಸಿದರು.
ಶೇರೆ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರು 6 ವಿಕೆಟ್‌ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿದರು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ 8 ವಿಕೆಟ್‌ಗಳಿಗೆ 105 ರನ್‌ಗಳ ಸಾಧಾರಣ ಮೊತ್ತ ಸಂಪಾದಿಸಲಷ್ಟೇ ಶಕ್ತವಾಯಿತು.
ಮೂರನೇ ಕ್ರಮಾಂಕದ ಆಟಗಾರ್ತಿ ಹೀಥರ್ ನೈಟ್ 24 ಎಸೆತಗಳಲ್ಲಿ 3 ಬೌಂಡರಿಗಳಿದ್ದ 29 ರನ್‌ಗಳಿಸಿದ್ದೇ ಉತ್ತಮ ಸಾಧನೆಯಾಯಿತು. ಆಸ್ಟ್ರೇಲಿಯಾ ಪರ ಉತ್ತಮ ಬೌಲಿಂಗ್ ಮಾಡಿದ ಸಾರಾ ಕಾಯ್ಟೆ 3 ಹಾಗೂ ಎಲಿಸೆ ಪೆರ್ರಿ ಮತ್ತು ರೇನೆ ಫಾರೆಲ್ ತಲಾ 2 ವಿಕೆಟ್ ಉರುಳಿಸಿದರು.
ಅಲ್ಪ ಮೊತ್ತದ ಗುರಿ ಬೆಂಬತ್ತಿದ ಆಸ್ಟ್ರೇಲಿಯಾ ಇನ್ನೂ 4.5 ಓವರುಗಳು ಉಳಿದಿರುವಂತೆಯೇ 4 ವಿಕೆಟ್ ನಷ್ಟಕ್ಕೆ 106 ರನ್‌ಗಳಿಸಿ ಸುಲಭ ಗೆಲವು ಪಡೆಯಿತು.
ನಾಯಕಿ ಮೆಗ್ ಲ್ಯಾನಿಂಗ್ (44ರನ್, 30 ಎಸೆತ, 2 ಬೌಂಡರಿ, 1 ಸಿಕ್ಸರ್) ಮತ್ತು ಎಲಿಸೆ ಪೆರ್ರಿ (ಅಜೇಯ 31, 32 ಎಸೆತ, 3 ಬೌಂಡರಿ, 1 ಸಿಕ್ಸರ್) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಆಸ್ಟ್ರೇಲಿಯಾಕ್ಕೆ ನಿರೀಕ್ಷೆಯಂತೆ ಚಾಂಪಿಯನ್‌ಪಟ್ಟ ದಕ್ಕಲು ನೆರವಾದರು.
ಇಂಗ್ಲೆಂಡ್ ಪರ ನತಾಲಿ ಸಿವೆರ್ 2 ವಿಕೆಟ್ ಕಬಳಿಸಿದರೆ, ಇತರೆ ಬೌಲಿಂಗಾರ್ತಿಯರು ಪ್ರಭಾವ ಬೀರುವಲ್ಲಿ ವಿಫಲರಾದರು.

ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ 20 ಓವರುಗಳಲ್ಲಿ 8 ವಿಕೆಟ್‌ಗೆ 105 (ಹೀಥರ್ ನೈಟ್ 29, ಸಾರಾ ಟೇಲರ್ 18, ಚಾರ್ಲೊಟೆ ಎಡ್ವರ್ಡ್ 13, ಆಮಿ ಜೋನ್ಸ್ 12, ಸಾರಾ ಕಾಯ್ಟೆ 16ಕ್ಕೆ3, ಎಲಿಸೆ ಪೆರ್ರಿ 13ಕ್ಕೆ2, ರೇನೆ ಫಾರೆಲ್ 27ಕ್ಕೆ2).
ಆಸ್ಟ್ರೇಲಿಯಾ 15.1 ಓವರುಗಳಲ್ಲಿ 4 ವಿಕೆಟ್‌ಗೆ 106 (ಮೆಗ್ ಲ್ಯಾನಿಂಗ್ 44, ಎಲಿಸೆ ಪೆರ್ರಿ ಅಜೇಯ 31, ಜೆಸ್ ಜೊನಾಸೆನ್ 15, ಎಲಿಸೆ ವಿಲಾನಿ 12, ನತಾಲಿ ಸಿವೆರ್ 12ಕ್ಕೆ2).
ಪಂದ್ಯಶ್ರೇಷ್ಠೆ : ಸಾರಾ ಕಾಯ್ಟೆ
ಸರಣಿಶ್ರೇಷ್ಠೆ : ಅನ್ಯಾ ಶ್ರುಬಸೋಲೆ (ಇಂಗ್ಲೆಂಡ್)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement