ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಯೂತ್ ಒಲಿಂಪಿಕ್ಸ್‌ಗೆ ಸುತಿರ್ಥಾ, ಅಭಿಷೇಕ್ ಅರ್ಹತೆ

Mainashree
Updated On : 6 Apr 2014, 10:34 am

ಬ್ಯಾಂಕಾಕ್: ಭಾರತದ ಭರವಸೆಯಟೇಬಲ್ ಟೆನಿಸ್ ತಾರೆಗಳಾದ ಸುತಿರ್ಥಾ ಮುಖರ್ಜಿ ಮತ್ತು ಅಭಿಷೇಕ್ ಯಾದವ್ ಅವರು ಚೀನಾದಲ್ಲಿ ನಡೆಯಲಿರುವ ಯೂತ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.
ಏಷ್ಯನ್ ಅರ್ಹತಾ ಪಂದ್ಯಾವಳಿಯಲ್ಲಿ ಮಲೇಷ್ಯಾದ ಎನ್. ಖಿ ಏಂಜೆಲಿನೆ ತಾಂಗ್ ಅವರನ್ನು 4-0 ಅಂತರದಿಂದ ಪರಾಭವಗೊಳಿಸಿದ ಸುತಿರ್ಥಾ ಅವರು ಮಹತ್ವದ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡರು.
11-5, 11-4, 11-2, 11-9 ಸೆಟ್‌ಗಳಿಂದ ಜಯ ಸಾಧಿಸಿದ ಮುಖರ್ಜಿ ಅವರು ಆಗಸ್ಟ್‌ನಲ್ಲಿ ನಡೆಯಲಿರುವ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡರು. ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಮುಖರ್ಜಿ ಅವರು ಜಯ ಸಾಧಿಸುವಲ್ಲಿ ಯಶಸ್ವಿಯಾದರು. ಮೊದಲ ಮೂರು ಸೆಟ್‌ಗಳಲ್ಲಿ ಸುಲಭವಾಗಿ ಜಯ ಕಂಡುಕೊಂಡ ಮುಖರ್ಜಿ, 4ನೇ ಸೆಟ್‌ನಲ್ಲಿ ಕೊಂಚ ಕಠಿಣ ಸವಾಲು ಎದುರಿಸಿದರು.
ಇನ್ನು ಅಭಿಷೇಕ್ ಯಾದವ್ ಅವರು ಸಿಂಗಾಪುರದ ಯಿನ್ ಜಿಂಗ್ ಯೂನ್ ಅವರನ್ನು 4-3 (11-5, 11-8, 10-12, 11-9, 7-11, 7-11, 11-6) ಸೋಲಿಸುವ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement