ಫ್ಯಾಮಿಲಿ ಸರ್ಕಲ್ ಕಪ್ ಪೆಟ್ಕೊವಿಚ್‌ಗೆ ಪ್ರಶಸ್ತಿ
ಚಾರ್ಲ್ಸ್‌ಟನ್ (ಅಮೆರಿಕ): ಜರ್ಮನಿಯ ಆ್ಯಂಡ್ರಿಯಾ ಪೆಟ್ಕೊವಿಚ್ ಅವರು ಫ್ಯಾಮಿಲಿ ಸರ್ಕಲ್ ಕಪ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಆ್ಯಂಡ್ರಿಯಾ ಪೆಟ್ಕೊವಿಚ್ 7-5, 6-2 ನೇರ ಸೆಟ್‌ಗಳಿಂದ ಸ್ಲೊವಾಕಿಯಾದ ಜಾನಾ ಕೆಪೆಲೊವಾ ಅವರನ್ನು ಪರಾಭವಗೊಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಹದಿನಾಲ್ಕನೇ ಶ್ರೇಯಾಂಕಿತ ಆಟಗಾರ್ತಿ ಆ್ಯಂಡ್ರಿಯಾ, ಮೊದಲ ಸೆಟ್‌ನಲ್ಲಿ ಮಾತ್ರ ಎದುರಾಳಿ ಆಟಗಾರ್ತಿಯಿಂದ ಕಠಿಣ ಸವಾಲುಗಳನ್ನು ಎದುರಿಸಿದರು.
ಆದರೆ, ಎರಡನೇ ಸೆಟ್‌ನಲ್ಲಿ ಹೆಚ್ಚು ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿದ ಜರ್ಮನಿ ಆಟಗಾರ್ತಿಯು ಜಾನಾ ಕೆಪೆಲೊವಾಗೆ ಕೇವಲ ಎರಡು ಗೇಮ್‌ಗಳನ್ನು ಗೆದ್ದುಕೊಳ್ಳಲಷ್ಟೇ ಅವಕಾಶ ನೀಡಿದ ಅವರು ಪಂದ್ಯವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಗೆಲವಿನ ನಗೆ ಬೀರಿದರು.