ಮಹಿಳಾ ಫುಟ್ಬಾಲ್ಗೆ ಆಯ್ಕೆ ಟ್ರಯಲ್ಸ್
ಬೆಂಗಳೂರು: ಅಸ್ಸಾಂನಲ್ಲಿ ಬರುವ ಏಪ್ರಿಲ್ 27ರಿಂದ ಮೇ 11ರವರೆಗೆ ನಡೆಯಲಿರುವ 20ನೇ ಮಹಿಳೆಯರ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ಶಿಪ್ಗೆ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯನ್ನು ಪ್ರತಿನಿಧಿಸುವ ಮಹಿಳಾ ಫುಟ್ಬಾಲ್ ಆಟಗಾರ್ತಿಯರನ್ನು ಆಯ್ಕೆ ಮಾಡಲಾಗುತ್ತದೆ.
ಆಯ್ಕೆ ಟ್ರಯಲ್ಸ್ ಮತ್ತು ತರಬೇತಿ ಶಿಬಿರ ಬೆಂಗಳೂರು ಫುಟ್ಬಾಲ್ ಸ್ಟೇಡಿಯಂನಲ್ಲಿ ಏಪ್ರಿಲ್ 9ರಂದು ಮಧ್ಯಾಹ್ನ 3.30ರಿಂದ ಸಂಜೆ 5.30ರವರೆಗೆ ನಡೆಯಲಿದೆ. ಹೀಗಾಗಿ ಆಟಗಾರ್ತಿಯರು ಈ ಸಮಯದಲ್ಲಿ ರಾಜ್ಯ ತಂಡದ ಕೋಚ್ ಆಗಿರುವ ಚಿತ್ರಾ ಗಂಗಾಧರನ್ ಅವರಿಗೆ ವರದಿ ಮಾಡಿಕೊಳ್ಳಬೇಕು.