ಯುವಿಗೆ ಸಚಿನ್ ಬೆಂಬಲ
ಮುಂಬೈ: ಶ್ರೀಲಂಕಾ ವಿರುದ್ಧ ನಡೆದ ಟಿ20 ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡ ಯುವರಾಜ್ ಸಿಂಗ್‌ಗೆ ಮಾಜಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.
'ಯವರಾಜ್ ಪಂದ್ಯದಲ್ಲಿ ವೈಫಲ್ಯ ಕಂಡಿದ್ದಾರೆ ನಿಜ. ಆದರೆ, ಅವರು ಪಂದ್ಯದಿಂದ ಹೊರಗುಳಿಯುವುದರಿಂದ ಇನ್ನೂ ದೂರವಿದ್ದಾರೆ' ಎಂದಿದ್ದಾರೆ.
ಅಲ್ಲದೆ, 2015ರ ವಿಶ್ವಕಪ್ ಪಂದ್ಯಾವಳಿಗೆ ಭಾರತ ತಂಡದಲ್ಲಿ ಅವರು ಸ್ಥಾನ ಪಡೆಯಲಿ ಎಂಬ ಸ್ಫೂರ್ತಿಯ ಮಾತನಾಡಿದ್ದಾರೆ. 'ಯುವರಾಜ್ ಒಂದು ಪಂದ್ಯದಲ್ಲಿ ವೈಫಲ್ಯ ಕಂಡ ತಕ್ಷಣನಿನ್ನ ಹೋರಾಟ ಮುಗಿದಿಲ್ಲ. ನೀವು ನೆನಪಿಟ್ಟುಕೊಳ್ಳುವ ಹಲವು ಪ್ರದರ್ಶನ ಗಳನ್ನು ನೀಡಿದ್ದೀರಿ. ಇಂದು ನೀವು ವೈಫಲ್ಯ ಕಂಡಿರಬಹುದು. ಆದರೆ, ತಂಡದಿಂದ ಹೊರಗಳಿಯುವು ದರಿಂದ ತುಂಬಾ ದೂರವಿದ್ದೀರಿ. ನನ್ನಂತೆ ನಿನ್ನನ್ನು ಬೆಂಬಲಿಸುವವರು ಭಾರತದ ತುಂಬಾ ಇದ್ದಾರೆ. ಇದು ನಿನಗೆ ಗೊತ್ತಾಗಬೇಕು' ಎಂದು ಸಚಿನ್ ಅವರು ಫೇಸ್‌ಬುಕ್‌ನಲ್ಲಿ ಯುವರಾಜ್ ಬಗ್ಗೆ ಬರೆದುಕೊಂಡಿದ್ದಾರೆ.