ವಿಶ್ವಕಪ್ ಗೆದ್ದದ್ದು ಹೆಮ್ಮೆ: ಕುಮಾರ ಸಂಗಕ್ಕಾರ
ಮೀರ್ಪುರ: ವಿಶ್ವಕಪ್ ಪ್ರಶಸ್ತಿಯೊಂದಿಗೆ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ ಶ್ರೀಲಂಕಾದ ಹಿರಿಯ ಆಟಗಾರ ಕುಮಾರ ಸಂಗಕ್ಕಾರ, ಪ್ರಶಸ್ತಿ ಗೆದ್ದ ನಂತರರ ಹೆಮ್ಮೆ ಪಡುತ್ತಿದ್ದು, ಕ್ರೀಡೆಗೆ ಋಣಿಯಾಗಿರುವುದಾಗಿ ತಿಳಿಸಿದ್ದಾರೆ. ಈ ಅನುಭವ ಅದ್ಭುತವಾಗಿದೆ. ಅದನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ. ಇದೇ ಮೊದಲ ಬಾರಿಗೆ ನಾನು ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದೇನೆ. ಈ ಮೊದಲು ನಾವು ನಾಲ್ಕು ಬಾರಿ ನಿರಾಸೆ ಹೊಂದಿದ್ದೆವು. ಹಾಗಾಗಿ ಈಗಿನ ಅನುಭವವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ಆದರೆ ಹೆಮ್ಮೆಯಾಗುತ್ತಿದೆ ಎಂದು ತಿಳಿಸಿದರು.
ಶ್ರೀಲಂಕಾತಂಡದ ಹಿರಿಯ ಆಟಗಾರರಾದ ಮಹೆಲಾ ಜಯವರ್ದನೆ ಹಾಗೂ ಕುಮಾರ ಸಂಗಕ್ಕಾರ ಅವರ ಪಾಲಿಗೆ ಈ ಪಂದ್ಯ ಕಡೇಯ ಟಿ20 ಪಂದ್ಯವಾಗಿತ್ತು. ಈ ಪ್ರಶಸ್ತಿಯನ್ನು ಗೆದ್ದುಕೊಂಡಿರುವುದು ಹಿರಿಯ ಆಟಗಾರರಿಗೆ ಅತ್ಯುತ್ತಮ ವಿದಾಯದ ಕ್ಷಣವಾಗಿ ಪರಿಣಮಿಸಿದೆ.
ಈ ಹಂತಕ್ಕೆ ಬಂದು ತಲುಪುವುದರ ಹಿಂದಿನ ಶ್ರಮವನ್ನು ನಾವು ಅರಿಯಬೇಕು. ಪ್ರತಿ ಹಂತದಲ್ಲೂ ಕೇವಲ ತಂಡದ ಸಹ ಆಟಗಾರರ ಜತೆಗೆ ಕುಟುಂಬ, ಸ್ನೇಹಿತರು, ಅಭಿಮಾನಿಗಳು ಹಾಗೂ ಸಹಾಯಕ ಸಿಬ್ಬಂದಿ ಬೆಂಬಲ ಮಹತ್ವದ್ದಾಗಿದೆ.