ಅಗ್ರಸ್ಥಾನದಲ್ಲಿ ಅಧಿಬನ್
ಶಾರ್ಜಾ: ಗ್ರ್ಯಾಂಡ್ ಮಾಸ್ಟರ್ ಬಿ ಅಧಿಬನ್ ಏಷ್ಯನ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ಮುಂದುವರಿಸಿದ್ದು, ಜಂಟಿ ಅಗ್ರಸ್ಥಾನದಲ್ಲಿದ್ದಾರೆ.
ಸೋಮವಾರ ನಡೆದ ಪಂದ್ಯಾವಳಿಯ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಉಜ್ಬೇಕಿಸ್ತಾನದ ಮಾಜಿ ವಿಶ್ವ ಚಾಂಪಿಯನ್ ರುಸ್ತಮ್ ಕಸಿಮ್ಜನೊವ್ ಅವರನ್ನು ಮಣಿಸಿದ್ದಾರೆ.
ಈ ಗೆಲವಿನ ಮೂಲಕ ಅಧಿಬನ್ ಪಂದ್ಯಾವಳಿಯಲ್ಲಿ 3.5 ಅಂಕಗಳನ್ನು ಪಡೆದುಕೊಂಡಿದ್ದು, ಜಂಟಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಅಧಿಬನ್, ಚೀನಾದ ಯು ಯಾಂಗೈ ಮತ್ತು ಇರಾನ್‌ನ ಎಸನ್ ಗೆಹೆಮ್ ಮಗ್‌ಹಮಿ ಜತೆ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ.
ಇನ್ನು ಭಾರತದ ಮತ್ತೊಬ್ಬ ಭರವಸೆಯ ಆಟಗಾರ ಅಭಿಜಿತ್ ಗುಪ್ತಾ ತಮ್ಮ ಪಂದ್ಯದಲ್ಲಿ ಆಘಾತಕಾರಿ ಸೋಲನುಭವಿಸಿದ್ದಾರೆ. ತಮ್ಮ ಎದುರಾಳಿ ಖತಾರ್‌ನ ಅಲ್ ಸೈಯದ್ ಮೊಹಮದ್ ವಿರುದ್ಧ ಡ್ರಾ ಸಾಧಿಸಬಹುದಾದ ಪಂದ್ಯದಲ್ಲಿ ಸೋಲನುಭವಿಸಿದ್ದು, ನಿರಾಸೆ ಮೂಡಿಸಿತು.
ಇನ್ನು ಭಾರತದ ಅತ್ಯಂತ ಶ್ರೇಷ್ಠ ಶ್ರೇಯಾಂಕ ಪಡೆದಿರುವ ಕೃಷ್ಣನ್ ಶಶಿಕಿರಣ್ ತಮ್ಮ ಎದುರಾಳಿ ಗಾವ್ ರುಯ್ ವಿರುದ್ಧ ಸುಲಭ ಗೆಲವು ದಾಖಲಿಸುವ ಮೂಲಕ 2.5 ಅಂಕಗಳನ್ನು ಸಂಪಾದಿಸಿದ್ದಾರೆ. ಅಲ್ಲದೆ ಭಾರತದ ಇತರೆ ಆಟಗಾರರಾದ ವಿದಿತಿ ಗುಜರಾತ್, ದೆಬಶಿಶ್ ದಾಸ್, ಪರಿಮರ್ಜನ ನೆಗಿ ಮತ್ತು ಸೂರ್ಯಶೇಖರ ಗಂಗೂಲಿ 2.5 ಅಂಕಗಳನ್ನು ಪಡೆದಿದ್ದಾರೆ.
ಪಂದ್ಯಾವಳಿಯಲ್ಲಿ ಅನ್ನು 5 ಸುತ್ತುಗಳು ಬಾಕಿ ಇದ್ದು, ಪ್ರತಿ ಪಂದ್ಯವೂ ಅಧಿಬಾನ್ ಪಾಲಿಗೆ ಮಹತ್ವದ್ದಾಗಿದೆ.
ಇನ್ನು ಮಹಿಳೆಯರ ವಿಭಾಗದಲ್ಲಿ ತಾನಿಯಾ ಸಖ್‌ದೇವ್ ಗೆಲವು ದಾಖಲಿಸಿದ್ದು, 2.5 ಅಂಕಗಳನ್ನು ಪಡೆದಿದ್ದಾರೆ. ಸೌಮ್ಯ ಸ್ವಾಮಿನಾಥನ್, ಈಶಾ ಕರೆವಾಡೆ, ಸ್ವಾತಿ ಘಾಟೆ ತಮ್ಮ ಎದುರಾಳಿ ವಿರುದ್ಧ ಡ್ರಾ ಸಾಧಿಸಿದ್ದಾರೆ.