ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸೂಪರ್ ಕಿಂಗ್ಸ್‌ಗೆ ಹೆದರಿದ ಡೆವಿಲ್ಸ್

ಆರಂಭಿಕ ಪಂದ್ಯದಲ್ಲಿ ಅನುಭವಿಸಿದ್ದ ಹೀನಾಯ ಸೋಲಿನ ಕಹಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ...

Vishwanath S
Updated On : 22 Apr 2014, 1:16 am

ಅಬುಧಾಬಿ: ಆರಂಭಿಕ ಪಂದ್ಯದಲ್ಲಿ ಅನುಭವಿಸಿದ್ದ ಹೀನಾಯ ಸೋಲಿನ ಕಹಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡನೇ ಪಂದ್ಯದ ಗೆಲವಿನಲ್ಲಿ ಮರೆತಿದೆ. ಐಪಿಎಲ್ 7ನೇ ಆವೃತ್ತಿಯ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ಗೆಲವು ದಾಖಲಿಸಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಸಿಎಸ್‌ಕೆ ತಂಡವು ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ವಿರುದ್ಧ 93 ರನ್‌ಗಳ ಜಯ ಸಾಧಿಸಿತು. ಈ ಮೂಲಕ ಸಿಎಸ್‌ಕೆ ಪಂದ್ಯಾವಳಿಯಲ್ಲಿ ಗೆಲವಿನ ಖಾತೆ ತೆರೆದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 177 ರನ್ ದಾಖಲಿಸಿತು. ನಂತರ ಈ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಡೇರ್‌ಡೆವಿಲ್ಸ್ ತಂಡ 15.4 ಓವರ್‌ಗಳಲ್ಲಿ 84 ರನ್‌ಗಳಿಗೆ ಆಲೌಟ್ ಆಯಿತು.
ಐಪಿಎಲ್‌ನ ಪ್ರಬಲ ತಂಡಗಳಲ್ಲಿ ಒಂದಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಹೀನಾಯ ಸೋಲನುಭವಿಸಿತ್ತು. ಹಾಗಾಗಿ ಸಿಎಸ್‌ಕೆ ಮತ್ತೆ ಗೆಲವಿನ ಹಾದಿಗೆ ಮರಳಲು ಈ ಪಂದ್ಯ ಮಹತ್ವದ್ದಾಗಿದೆ.
ಮಂದಗತಿಯ ಆರಂಭ: ಈ ಪಂದ್ಯದಲ್ಲೂ ಬೃಹತ್ ಮೊತ್ತ ದಾಖಲಿಸುವ ನಿಟ್ಟಿನಲ್ಲಿ ಸಿಎಸ್‌ಕೆ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತಾದರೂ, ತಂಡಕ್ಕೆ ಇನಿಂಗ್ಸ್ ಆರಂಭದಲ್ಲಿ ನಿರೀಕ್ಷಿತ ಮಟ್ಟದಲ್ಲಿ ರನ್ ಹರಿದು ಬರಲಿಲ್ಲ.
ವಿಶ್ವದ ಪ್ರಬಲ ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ಬ್ರೆಂಡನ್ ಮೆಕಲಂ ಹಾಗೂ ಡ್ವೈನ್ ಸ್ಮಿತ್ ಆರಂಭಿಕ ಜೋಡಿಯಾಗಿ ಕಣಕ್ಕಿಳಿದರು. ಕಳೆದ ಪಂದ್ಯದಂತೆ ಈ ಪಂದ್ಯದಲ್ಲೂ ಈ ಜೋಡಿ ಉತ್ತಮ ಆರಂಭ ನೀಡುವ ನಿರೀಕ್ಷೆ ಇತ್ತಾದರೂ, ಆ ನಿರೀಕ್ಷೆ ಯಶಸ್ವಿಯಾಗಲಿಲ್ಲ. ಏಕೆಂದರೆ ತಂಡ ಕೇವಲ 23 ರನ್ ದಾಖಲಿಸುವಷ್ಟರಲ್ಲಿ 9 ರನ್ ದಾಖಲಿಸಿದ್ದ ಬ್ರೆಂಡನ್ ಮೆಕಲಂ, ಉನದ್ಕತ್ ಎಸೆತದಲ್ಲಿ ಬಲಿಯಾದರು.
ಆ ನಂತರ ಸ್ಮಿತ್ ಜತೆಗೂಡಿದ ರೈನಾ, ಸಿಎಸ್‌ಕೆ ಇನಿಂಗ್ಸ್ ಕಟ್ಟುವತ್ತ ಮುಂದಾದರು. ಈ ಜೋಡಿ 54 ರನ್‌ಗಳ ಜತೆಯಾಟ ನೀಡಿತು. ಈ ವೇಳೆ 29 ರನ್‌ಗಳಿಸಿದ್ದ ಸ್ಮಿತ್ ನದೀಮ್‌ಗೆ ವಿಕೆಟ್ ಒಪ್ಪಿಸಿದರು. ಹಾಗಾಗಿ ತಂಡ 11 ಓವರ್‌ಗಳಲ್ಲಿ 2 ವಿಕೆಟ್‌ಗೆ ಕೇವಲ 77 ರನ್ ದಾಖಲಿಸಿತು.
ಅಬ್ಬರಿಸಿದ ಧೋನಿ: ತಂಡ ಸಂಕಷ್ಟದಲ್ಲಿದ್ದಾಗ ಅದ್ಭುತ ರೀತಿಯಲ್ಲಿ ಇನಿಂಗ್ಸ್ ಕಟ್ಟಿದ ಸುರೇಶ್ ರೈನಾ (56 ರನ್, 41 ಎಸೆತ, 5 ಬೌಂಡರಿ, 1 ಸಿಕ್ಸರ್) ತಂಡವನ್ನು ಸುಸ್ಥಿತಿಗೆ ತಂದರು. ರೈನಾ ವಿಕೆಟ್ ಬಳಿಕ ಕ್ರೀಸ್‌ಗೆ ಬಂದ ನಾಯಕ ಧೋನಿ ನಂತರದ ಓವರ್‌ಗಳಲ್ಲಿ ಅಬ್ಬರಿಸಿದರು.
ಡೆಲ್ಲಿ ಬೌಲರ್‌ಗಳಿಗೆ ಸಿಂಹಸ್ವಪ್ನವಾಗಿ ಕಾಡಿದ ಧೋನಿ, (32 ರನ್, 15 ಎಸೆತ, 2 ಬೌಂಡರಿ, 2 ಸಿಕ್ಸರ್) ತಂಡ 60 ರನ್ ಗಡಿ ದಾಟುವಂತೆ ಮಾಡಿದರು.
ಉಳಿದಂತೆ ಡುಪ್ಲೆಸಿಸ್ 17 ಎಸೆತಗಳಲ್ಲಿ 24 ರನ್, ರವೀಂದ್ರ ಜಡೇಜಾ 7, ಅಶ್ವಿನ್ 1 ದಾಖಲಿಸಿ ಔಟಾದರೆ, ಮನಾಸ್ ಅಜೇಯ 13 ರನ್ ದಾಖಲಿಸಿದರು.
ಡೆಲ್ಲಿ ತಂಡದ ಪರ ಉನದ್ಕತ್ 3, ಶಮಿ, ನದೀಮ್, ನಿಶಾಮ್ ತಲಾ 1 ವಿಕೆಟ್ ಪಡೆದರು.
ಹೆದರಿದ ಡೆವಿಲ್ಸ್: ಸಿಎಸ್‌ಕೆ ನೀಡಿದ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ತಂಡ ಯಾವುದೇ ಹಂತದಲ್ಲೂ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಲಿಲ್ಲ. ಕೇವಲ 84 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಶೋಚನೀಯ ಸೋಲನುಭವಿಸಿತು.
ಡೆಲ್ಲಿ ತಂಡದ ಪರ ದಿನೇಶ್ ಕಾರ್ತಿಕ್ (21 ರನ್, 22 ಎಸೆತ, 2 ಬೌಂಡರಿ) ಹಾಗೂ ಜಿಮ್ಮಿ ನಿಶಾಮ್ (22 ರನ್, 15 ಎಸೆತ, 2 ಬೌಂಡರಿ) ಅತಿ ಹೆಚ್ಚು ರನ್‌ಗಳಿಸಿದ ಆಟಗಾರರಾದರು. ನಿಗದಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡ ಪರಿಣಾಮ ಡೆವಿಲ್ಸ್ ತಂಡ ಹೀನಾಯ ಸೋಲನುಭವಿಸಿತು.
ಸಿಎಸ್‌ಕೆ ಪರ ಈಶ್ವರ್, ಜಡೇಜಾ ಹಾಗೂ ಅಶ್ವಿನ್ ತಲಾ 2 ವಿಕೆಟ್ ಪಡೆದರೆ, ಹಿಲ್ಫನ್‌ಹಾಸ್, ಮೋಹಿತ್, ಸ್ಮಿತ್ ತಲಾ 1 ವಿಕೆಟ್ ಪಡೆದರು.
ಸ್ಕೋರ್ ವಿವರ
ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 177 ರನ್
ಡ್ವೈನ್ ಸ್ಮಿತ್ ಬಿ ನದೀಮ್ 29, ಬ್ರೆಂಡನ್ ಮೆಕಲಂ ಸಿ ಪಾರ್ನೆಲ್ ಬಿ ಉನದ್ಕತ್ 9, ಸುರೇಶ್ ರೈನಾ ಸಿ ವಿಜಯ್ ಬಿ ನಿಶಾಮ್ 56, ಫಫ್ ಡುಪ್ಲೆಸಿಸ್ ಸಿ ವಿಜಯ್ ಬಿ ಶಮಿ 24, ಧೋನಿ ಸಿ ಅಗರ್‌ವಾಲ್ ಬಿ ಉನದ್ಕತ್ 32, ಜಡೇಜಾ ಸಿ ಕಾರ್ತಿಕ್ ಬಿ ಉನದ್ಕತ್ 7, ಮನಾಸ್ ಅಜೇಯ 13, ಅಶ್ವಿನ್ ರನೌಟ್ (ಶಮಿ) 1, ಹಿಲ್ಫನ್‌ಹಾಸ್ ಅಜೇಯ 0
ಇತರೆ: (ಲೆಗ್‌ಬೈ 3, ವೈಡ್ 3) ಒಟ್ಟು 6
ವಿಕೆಟ್ ಪತನ: 1-23, 2-77, 3-108, 4-141, 5-156, 6-162, 7-173
ಬೌಲಿಂಗ್ ವಿವರ
ಜೆ.ಪಿ ಡುಮಿನಿ 4-0-26-0, ಮೊಹ್ಮದ್ ಶಮಿ 4-0-45-1, ನದೀಮ್ 3-0-29-1, ಉನದ್ಕತ್ 4-0-32-3, ಜಿಮ್ಮಿ ನಿಶಾಮ್ 4-0-29-1. ಮುರಳಿ ವಿಜಯ್ 1-0-13-0
ಪಂದ್ಯಶ್ರೇಷ್ಠ: ಸುರೇಶ್ ರೈನಾ
ಡೆಲ್ಲಿ ಡೇರ್‌ಡೆವಿಲ್ಸ್ 15.4 ಓವರ್‌ಗಳಲ್ಲಿ 84
ಮಾಯಾಂಕ್ ಸಿ ರೈನಾ ಬಿ ಪಾಂಡೆ 2, ವಿಜಯ್ ಸಿ ಡುಪ್ಲೆಸಿಸ್ ಬಿ ಮೊಹಿತ್ 11, ಕಾರ್ತಿಕ್ ಬಿ ಅಶ್ವಿನ್ 21, ತಿವಾರಿ ಸಿ ಡುಪ್ಲೆಸಿಸ್ ಬಿ ಪಾಂಡೆ 0, ಡುಮಿನಿ ಎಲ್‌ಬಿ ಸ್ಮಿತ್ 15, ಟೇಲರ್ ಸಿ ಧೋನಿ ಬಿ ಹಿಲ್ಫನ್‌ಹಾಸ್ 6, ನಿಶಾಮ್ ಸಿ ರೈನಾ ಬಿ ಜಡೇಜಾ 22, ನದೀಮ್  ಸಿ ರೈನಾ ಬಿ ಜಡೇಜಾ 3, ಶಮಿ ಸಿ ಮೆಕಲಂ ಬಿ ಅಶ್ವಿನ್ 1, ಉನದ್ಕತ್ ಅಜೇಯ 1, ಕೌಲ್ಟರ್ ನೀಲ್ ಆ್ಯಬ್‌ಸೆಂಟ್ ಹರ್ಟ್
ಇತರೆ: (ವೈಡ್ 2) ಒಟ್ಟು 2
ವಿಕೆಟ್ ಪತನ: 1-8, 2-15, 3-17, 4-42, 5-50, 6-74, 7-80, 8-82, 9-84
ಬೌಲಿಂಗ್ ವಿವರ
ಈಶ್ವರ್ ಪಾಂಡೆ 4-0-23-2, ಹಿಲ್ಫನ್‌ಹಾಸ್ 2-0-9-1, ಮೊಹಿತ್ 3-0-17-1, ಡ್ವೈನ್ ಸ್ಮಿತ್ 2-0-14-1, ಜಡೇಜಾ 2.4-0-18-2, ಆರ್.ಅಶ್ವಿನ್ 2-0-3-2
ಅಂಕಪಟ್ಟಿ
ತಂಡ    ಪಂದ್ಯ    ಜಯ    ಸೋಲು    ಅಂಕ    ಸರಾಸರಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು    2    2    0    4    ೤1.168
ಕಿಂಗ್ಸ್ ಇಲೆವೆನ್ ಪಂಜಾಬ್    2    2    0    4    ೤0.740
ಚೆನ್ನೈ ಸೂಪರ್ ಕಿಂಗ್ಸ್    2    1    1    2    ೤2.082
ಕೋಲ್ಕತಾ ನೈಟ್ ರೈಡರ್ಸ್    2    1    1    2    ೤0.909
ರಾಜಸ್ಥಾನ ರಾಯಲ್ಸ್    2    1    1    2    - 0.178
ಡೆಲ್ಲಿ ಡೇರ್‌ಡೆವಿಲ್ಸ್    3    1    2    2    - 1.974
ಸನ್‌ರೈಸರ್ಸ್ ಹೈದರಾಬಾದ್    1    0    1    0    - 0.273
ಮುಂಬೈ ಇಂಡಿಯನ್ಸ್    2    0    2    0    -1.515


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement