ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

2015ರ ವಿಶ್ವಕಪ್‌ನಲ್ಲಿ ಜಹೀರ್ ಆಡಬೇಕು

Vishwanath S
Updated On : 23 Apr 2014, 12:43 pm

ನವದೆಹಲಿ: ಫಾರ್ಮ್ ಹಾಗೂ ಫಿಟ್ನೆಸ್ ಸಮಸ್ಯೆಯಿಂದಾಗಿ ಭಾರತ ಅಂತಾರಾಷ್ಟ್ರೀಯ ತಂಡದಿಂದ ಹೊರಗುಳಿದಿರುವ ಭಾರತ ತಂಡದ ಹಿರಿಯ ವೇಗದ ಬೌಲರ್ ಜಹೀರ್ ಖಾನ್ ಮತ್ತೆ ಭಾರತ ತಂಡಕ್ಕೆ ಆಯ್ಕೆಯಾಗ ಬೇಕು ಎಂದು ಮಾಜಿ ವೇಗಿ ಜಾವಗಲ್ ಶ್ರೀನಾಥ್ ಬೆಂಬಲ ಸೂಚಿಸಿದ್ದಾರೆ.
ಜಹೀರ್ ಖಾನ್ ಅತ್ಯದ್ಭುತ ಬೌಲರ್. ಅವರು ಮುಂದಿನ ವಿಶ್ವಕಪ್‌ನಲ್ಲಿ ಆಡಲು ಇಚ್ಛೆ ಇದ್ದು, ಸಮರ್ಥ ಕಾಣಿಕೆ ನೀಡುವ ಸಾಮರ್ಥ ಇದ್ದರೆ, ಅವರು ಮುಂಬರುವ ವಿಶ್ವಕಪ್ ಪಂದ್ಯಾವಳಿಗೆ ಮೊದಲ ಆಯ್ಕೆಯಾಗಲಿದ್ದಾರೆ. ಆದರೆ ಜಹೀರ್ ಅವರಲ್ಲಿ ಮುಂದಿನ ವಿಶ್ವಕಪ್ ಆಡಬೇಕೆನ್ನುವ ಹಂಬಲ ಇದೆಯೇ, ಅದಕ್ಕೆ ಅವರು ತಯಾರಿ ನಡೆಸುತ್ತಿದ್ದಾರೆಯೇ, ಎಂಬುದನ್ನು ಗಮನಿಸಬೇಕು ಎಂದು ಜಾವಗಲ್ ಶ್ರೀನಾಥ್ ತಿಳಿಸಿದ್ದಾರೆ.
ಮೊಹಮದ್ ಶಮಿ ಸಹ ಅತ್ಯುತ್ತಮ ಬೌಲರ್, ಅಲ್ಲದೆ ಭುವನೇಶ್ವರ್ ಕುಮಾರ್ ಸಹ ಬೌಲಿಂಗ್‌ನಲ್ಲಿ ಪ್ರಬುದ್ಧತೆ ಕಾಣುತ್ತಿದ್ದಾರೆ. ಇಶಾಂತ್ ಶರ್ಮಾ ಮತ್ತೆ ಲಯ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ ಸ್ಥಿರ ಪ್ರದರ್ಶನ ನೀಡುವ ಭರವಸೆ ಮೂಡಿಸಿದ್ದಾರೆ ಎಂದು ಶ್ರೀನಾಥ್ ಪ್ರಸ್ತುತ ಭಾರತೀಯ ಬೌಲರ್‌ಗಳನ್ನು ಹೊಗಳಿದ್ದಾರೆ.
ಕ್ರೀಡೆಯ ಎಲ್ಲಾ ಮಾದರಿಯಲ್ಲಿ ಯಶಸ್ಸು ಸಾಧಿಸುವುದು ವೇಗದ ಬೌಲರ್‌ನ ಕರ್ತವ್ಯವಾಗಿದೆ. ಆದರೆ ವೇಗದ ಬೌಲರ್‌ಗಳು ಟಿ20 ಮಾದರಿಯಲ್ಲಿ ವೈಫಲ್ಯ ಕಾಣುತ್ತಿದ್ದಾರೆ. ಅಲ್ಲದೆ ಅದರ ಲಾಭ ಬ್ಯಾಟ್ಸ್‌ಮನ್‌ಗಳ ಪಾಲಾಗುತ್ತಿದೆ. ಅಲ್ಲದೆ ಇತ್ತೀಚಿನ ದಿನಗದಳಲ್ಲಿ ವೇಗದ ಬೌಲರ್‌ಗಳ ಪರಿಸ್ಥಿತಿ ನಿರಾಸೆ ಮೂಡಿಸುತ್ತಿದೆ ಎಂದು ಮೈಸೂರು ಎಕ್ಸ್‌ಪ್ರೆಸ್ ಅಭಿಪ್ರಾಯ ಪಟ್ಟರು.
ಇದೇವೇಳೆ ಮಾತನಾಡಿದ ಅಜಿತ್ ವಾಡೇಕರ್, ಸುನಿಲ್ ಗಾವಸ್ಕರ್ ಅವರನ್ನು ಬಿಸಿಸಿಐನ ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸುಪ್ರೀಂ ಕೋರ್ಟ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಗಾವಸ್ಕರ್ ಅವರು ಸ್ಫೂರ್ತಿದಾಯಕ ಆಟಗಾರ. ಆತ ಅತ್ಯದ್ಭುತ ನಾಯಕನಾಗಿದ್ದು, ಉತ್ತಮ ಕ್ರೀಡಾಪಟುವಾಗಿ ಕ್ರಿಕೆಟ್ ಕ್ರೀಡೆಗೆ ಸಾಕಷ್ಟು ಸುಮಧುರ ಕ್ಷಣಗಳನ್ನು ನೀಡಿದ್ದಾರೆ. ಅವರ ಪ್ರಾಮಾಣಿಕತೆಯನ್ನು ಯಾರು ಪ್ರಶ್ನಿಸುವಂತಿಲ್ಲ. ಆ ರೀತಿಯಾದ ಆಟಗಾರರನ್ನು ನಾವು ಆಧುಕ ಕ್ರಿಕೆಟ್‌ನಲ್ಲಿ ಇನ್ನಷ್ಟು ಕಾಣಬೇಕಿದೆ ಎಂದು ತಿಳಿಸಿದರು.
ಕ್ರಿಕೆಟ್‌ನಲ್ಲಿ ಬೌಲರ್ ಹಾಗೂ ಬ್ಯಾಟ್ಸ್‌ಮನ್‌ಗಳು ಪರಸ್ಪರ ವಿರುದ್ಧವಾಗಿ ಆಡುತ್ತಾರೆ. ಅದು ಕ್ರೀಡೆಯ ಭಾಗವಾಗಿದೆ. ಆದರೆ ಆದು ತನ್ನ ಎಲ್ಲೆಯನ್ನು ಮೀರಬಾರದು. ನಮ್ಮ ಕಾಲದಲ್ಲೂ ಸ್ಲೆಡ್ಜಿಂಗ್‌ಗಳು ನಡೆಯುತ್ತಿದ್ದವು. ಆದರೆ ಈಗಿನ ರೀತಿಯಲ್ಲಿ ಮೈದಾನದ ಪ್ರತಿ ಮೂಲೆಯಲ್ಲೂ ಕ್ಯಾಮರಾ ಇಲ್ಲದ ಕಾರಣ ಅದು ಹೊರಗಡೆ ಕಾಣಿಸುತ್ತಿರಲಿಲ್ಲ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement