ರಾಯಲ್ಸ್ ಮೇಲೆ ಕಿಂಗ್ಸ್ ಪ್ರಭುತ್ವ
ಬ್ಯಾಟಿಂಗ್ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲವಾದ ಚೆನ್ನೈ ತಂಡ ಬೌಲಿಂಗ್ನಲ್ಲಿ ...
ದುಬೈ: ಬ್ಯಾಟಿಂಗ್ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲವಾದ ಚೆನ್ನೈ ತಂಡ ಬೌಲಿಂಗ್ನಲ್ಲಿ ಮಾರಕ ದಾಳಿ ನಡೆಸುವ ಮೂಲಕ ರಾಜಸ್ಥಾನ ರಾಯಲ್ಸ್ ವಿರುದ್ಧ ಪ್ರಭುತ್ವ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಬುಧವಾರ ದುಬೈನಲ್ಲಿ ನಡೆದ ಐಪಿಎಲ್ ಟಿ20 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ, ರಾಜಸ್ಥಾನ ರಾಯಲ್ಸ್ ವಿರುದ್ಧ 7 ರನ್ಗಳ ಗೆಲವು ದಾಖಲಿಸಿದೆ. ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ಗೆ ನೀಡಿತು.
ನಂತರ ಸಿಎಸ್ಕೆ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 140 ರನ್ಗಳ ಸಾಧಾರಣ ಮೊತ್ತ ದಾಖಲಿಸಿತು. ನಂತರ ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡ 19.5 ಓವರ್ಗಳಲ್ಲಿ 133 ರನ್ಗಳಿಗೆ ಆಲೌಟ್ ಆಯಿತು.
ಆಸರೆಯಾದ ಸ್ಮಿತ್: ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಾಧಾರಣ ಆರಂಭ ದೊರೆಯಿತು. ಆರಂಭಿಕರಾಗಿ ಕಣಕ್ಕಿಳಿದ ಬ್ರೆಂಡನ್ ಮೆಕಲಂ ಹಾಗೂ ಡ್ವೈನ್ ಸ್ಮಿತ್ ತಂಡಕ್ಕೆ 35 ರನ್ಗಳ ಆರಂಭ ನೀಡಿದರು. ಬ್ರೆಂಡನ್ ಮೆಕಲಂ (6) ರಕ್ಷಣಾತ್ಮಕ ಆಟಕ್ಕೆ ಮುಂದಾದರಾದರೂ, ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ.
ನಂತರ ಬಂದ ಸುರೇಶ್ ರೈನಾ (4), ಫಫ್ ಡುಪ್ಲೆಸಿಸ್ (7), ಮಹೇಂದ್ರ ಸಿಂಗ್ ಧೋನಿ (5), ಬಂದ ವೇಗದಲ್ಲೇ ಪೆವಿಲಿಯನ್ಗೆ ಮರಳಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೇವಲ 11.1 ಓವರ್ಗಳಿಗೆ 74 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಅರ್ಧ ತಂಡ ಪೆವಿಲಿಯನ್ ಸೇರಿಕೊಂಡಿತ್ತು. ಇದು ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಯಿತು. ಇದಕ್ಕು ಮುನ್ನ ಅಬ್ಬರದ ಬ್ಯಾಟಿಂಗ್ ನಡೆಸಿದ್ದ ಡ್ವೈನ್ ಸ್ಮಿತ್ (50 ರನ್, 28 ಎಸೆತ, 6 ಬೌಂಡರಿ, 3 ಸಿಕ್ಸರ್) ತಂಡಕ್ಕೆ ಆಸರೆಯಾಗಿ ನಿಂತರು. ಕೇವಲ 10 ರನ್ಗಳಿಸಿದ್ದ ಮಿಥುನ್ ಮನ್ಹಾಸ್ ಸಹ ಬೇಗನೆ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು. ನಂತರ ಜಡೇಜಾ ಜತೆಯಾದ ಆರ್.ಅಶ್ವಿನ್ 7ನೇ ವಿಕೆಟ್ಗೆ ಮುರಿಯದ 39 ರನ್ ಕಲೆಹಾಕುವ ಮೂಲಕ ತಂಡ 140 ರನ್ ಗಡಿ ಮುಟ್ಟುವಂತೆ ನೋಡಿಕೊಂಡರು.
ಕುಸಿದ ರಾಯಲ್ಸ್: ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸೋಲಿನತ್ತ ಹೆಜ್ಜೆ ಹಾಕಿತು. ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ರಜತ್ ಭಾಟಿಯಾ (23) ಹಾಗೂ ಅಂತಿಮ ಓವರ್ನಲ್ಲಿ ಅಬ್ಬರಿಸಿದ ಧವಳ್ ಕುಲಕರ್ಣಿ (ಅಜೇಯ 28) ಹೋರಾಟ ನಡೆಸಿದರಾದರೂ ತಂಡವನ್ನು ಗೆಲವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಉಳಿದಂತೆ ಯಾವುದೇ ಬ್ಯಾಟ್ಸ್ಮನ್ ಪರಿಣಾಮಕಾರಿ ಬ್ಯಾಟಿಂಗ್ ನಡೆಸದ ಹಿನ್ನಲೆಯಲ್ಲಿ ತಂಡ ಹೀನಾಯ ಸೋಲನುಭವಿಸುವಂತಾಯಿತು. ಇನ್ನು ಸಿಎಸ್ಕೆ ಪರ ಮಾರಕ ಬೌಲಿಂಗ್ ನಡೆಸಿದ ರವೀಂದ್ರ ಜಡೇಜಾ 4 ಓವರ್ಗಳಲ್ಲಿ 33 ರನ್ಗಳಿಗೆ 4 ವಿಕೆಟ್ ಕಬಳಿಸಿ ಪಂದ್ಯದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 6 ವಿಕೆಟ್ಗೆ 140
ಡ್ವೈನ್ ಸ್ಮಿತ್ ಸಿ ವ್ಯಾಟ್ಸನ್ ಬಿ ಬಿನ್ನಿ 50
ಬ್ರೆಂಡನ್ ಮೆಕಲಂ ಸಿ ಸ್ಮಿತ್ ಬಿ ಫಾಕ್ನರ್ 6
ರೈನಾ ಸಿ ಕುಲಕರ್ಣಿ ಬಿ ಭಾಟಿಯಾ 4
ಫಫ್ ಡುಪ್ಲೆಸಿಸ್ ರನೌಟ್ (ಭಾಟಿಯಾ) 7
ಧೋನಿ ಸಿ ಫಾಕ್ನರ್ ಬಿ ಪ್ರವಿಣ್ 5
ಜಡೇಜಾ ಅಜೇಯ 36
ಮನ್ಹಾಸ್ ಸಿ ರಹಾನೆ ಬಿ ಭಾಟಿಯಾ 10
ಅಶ್ವಿನ್ ಅಜೇಯ 9
ಇತರೆ: (ಲೆಗ್ ಬೈ 2, ವೈಡ್ 11) ಒಟ್ಟು 13
ವಿಕೆಟ್ ಪತನ: 1-35, 2-59, 3-64, 4-71, 5-74, 6-101
ಬೌಲಿಂಗ್ ವಿವರ
ಧವಳ್ ಕುಲಕರ್ಣಿ 3-0-18-0
ಟಿಮ್ ಸೌಥಿ 4-0-27-0
ಜೇಮ್ಸ್ ಫಾಕ್ನರ್ 3-0-38-1
ಪ್ರವಿಣ್ ತಾಂಬೆ 4-0-27-1
ಸ್ಟುವರ್ಟ್ ಬಿನ್ನಿ 1-0-10-1
ರಜತ್ ಭಾಟಿಯಾ 4-0-13-2
ಶೇನ್ ವ್ಯಾಟ್ಸನ್ 1-0-5-0
ರಾಜಸ್ಥಾನ ರಾಯಲ್ಸ್ 19.5 ಓವರ್ಗಳಲ್ಲಿ 133
ಅಭಿಶೇಕ್ ನಾಯರ್ ರನೌಟ್ (ಮೆಕಲಂ) 5
ರಹಾನೆ ಸಿ ಮನ್ಹಾಸ್ ಬಿ ಅಶ್ವಿನ್ 15
ಸ್ಯಾಮ್ಸನ್ ಸಿ ಮತ್ತು ಬಿ ಜಡೇಜಾ 16
ಶೇನ್ ವ್ಯಾಟ್ಸನ್ ಸಿ ಹಿಲ್ಫನ್ಹಾಸ್ ಬಿ ಜಡೇಜಾ 7
ಸ್ಟುವರ್ಟ್ ಬಿನ್ನಿ ಸಿ ಡುಪ್ಲೆಸಿಸ್ ಬಿ ಮೊಹಿತ್ 8
ಸ್ಟೀವ್ ಸ್ಮಿತ್ ಸಿ ಡುಪ್ಲೆಸಿಸ್ ಬಿ ಜಡೇಜಾ 19
ರಜತ್ ಭಾಟಿಯಾ ಸಿ ಅಶ್ವಿನ್ ಬಿ ಹಿಲ್ಫನ್ಹಾಸ್ 23
ಫಾಕ್ನರ್ ಸಿ ಧೋನಿ ಬಿ ಈಶ್ವರ್ 4
ಟಿಮ್ ಸೌಥಿ ಬಿ ಜಡೇಜಾ 4
ಧವಳ್ ಕುಲಕರ್ಣಿ ಅಜೇಯ 28
ಪ್ರವಿಣ್ ತಾಂಬೆ ರನೌಟ್ (ಡುಪ್ಲೆಸಿಸ್/ಅಶ್ವಿನ್) 2
ಇತರೆ (ವೈಡ್ 2) ಒಟ್ಟು 2
ವಿಕೆಟ್ ಪತನ: 1-10, 2-37, 3-44, 4-44, 5-63, 6-75, 7-80, 8-85, 9-113, 10-133
ಬೌಲಿಂಗ್ ವಿವರ:
ಬೆನ್ ಹಿಲ್ಫನ್ಹಾಸ್ 4-0-32-1
ಈಶ್ವರ್ ಪಾಂಡೆ 4-1-22-1
ಆರ್ ಅಶ್ವಿನ್ 3.5-0-27-1
ರವೀಂದ್ರ ಜಡೇಜಾ 4-0-33-4
ಸುರೇಶ್ ರೈನಾ 2-0-6-0
ಮೋಹಿತ್ ಶರ್ಮಾ 2-0-13-1