ಕೆಕೆಆರ್ಗೆ ಕ್ರಿಸ್, ಕಾಲಿಸ್ ಆಸರೆ
ಶಾರ್ಜಾ: ಜಾಕ್ ಕಾಲಿಸ್ ಹಾಗೂ ಕ್ರಿಸ್ ಲಿನ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ ನೈಟ್ರೈಡರ್ಸ್ ತಂಡವು ಏಳನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
ಗುರುವಾರ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡವು ಆರ್ಸಿಬಿಗೆ 151 ರನ್ಗಳ ಸವಾಲು ನೀಡಿದೆ.ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ನಂತರ ಕೋಲ್ಕತಾ ನೈಟ್ರೈಡರ್ಸ್ ತಂಡವನ್ನು 20 ಓವರ್ಗಳಿಗೆ 6 ವಿಕೆಟ್ ಕಳೆದುಕೊಂಡು 143 ರನ್ ದಾಖಲಿಸಿದೆ.
ಚೇಸಿಂಗ್ನಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಆರ್ಸಿಬಿ, ಈ ಪಂದ್ಯದಲ್ಲೂ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಲ್ಲದೆ ಈ ಪಂದ್ಯದಲ್ಲಿ ಉಭಯ ತಂಡಗಳು ಎರಡು ಬದಲಾವಣೆ ಮಾಡಿದ್ದವು. ಆರ್ಸಿಬಿ ತಂಡ ನಿಕ್ ಮ್ಯಾಡಿನ್ಸನ್ ಬದಲಿಗೆ ಸ್ಪಿನ್ನರ್ ಮುತ್ತಯ್ಯ ಮುರಳಿಧರನ್ ಹಾಗೂ ಸಚಿನ್ ರಾಣಾ ಬದಲಿಗೆ ಯೋಗೇಶ್ ಟಕವಾಲೆ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿತು.
ಇನ್ನು ಕೆಕೆಆರ್ ತಂಡದ ಪರ ಪಿಯೂಶ್ ಚಾವ್ಲಾ ಬದಲಿಗೆ ಉಮೇಶ್ ಯಾದವ್ ಹಾಗೂ ಶಕಿಬ್ ಅಲ್ ಹಸನ್ ಬದಲಿಗೆ ಕ್ರಿಸ್ ಲಿನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು.
ಆರಂಭಿಕ ಕುಸಿತ: ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೋಲ್ಕತಾ ನೈಟ್ರೈಡರ್ಸ್ ತಂಡಕ್ಕೆ ನಿರೀಕ್ಷಿತ ಮಟ್ಟದಲ್ಲಿ ಆರಂಭ ಸಿಗಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಗೌತಮ್ ಗಂಭೀರ್ ಮತ್ತೊಮ್ಮೆ ಶೂನ್ಯ ಸಂಪಾದನೆಗೆ ಪೆವಿಲಿಯನ್ ಸೇರಿಕೊಂಡರು.
ನಂತರ ಬಂದ ಮನೀಷ್ ಪಾಂಡೆ ಸಹ ಕೇವಲ 5 ರನ್ ಗಳಿಸಿ ಆಲ್ಬಿ ಮಾರ್ಕೆಲ್ ಎಸೆತದಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ಆಲೌಟ್ ಆದರು. ಈ ಮೂಲಕ ಕೆಕೆಆರ್ ತಂಡ 10 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಆಸರೆಯಾದ ಕಾಲಿಸ್, ಲಿನ್: ಆರಂಭಿಕ ಆಘಾತ ಎದುರಿಸಿದ್ದ ಕೆಕೆಆರ್ ತಂಡಕ್ಕೆ ಆಸರೆಯಾಗಿದ್ದು, ಜಾಕ್ ಕಾಲಿಸ್ ಹಾಗೂ ಕ್ರಿಸ್ ಲಿನ್. ಈ ಜೋಡಿ ಮೂರನೇ ವಿಕೆಟ್ಗೆ 80 ರನ್ ಕಲೆಹಾಕಿದರು. 31 ಎಸೆತಗಳಲ್ಲಿ ಅಬ್ಬರದ 3 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 45 ರನ್ ಗಳಿಸಿದ್ದ ಕ್ರಿಸ್ ಲಿನ್ಗೆ ವರುಣ್ ಪೆವಿಲಿಯನ್ ಹಾದಿ ತೋರಿದರು. ಅದೇ ಓವರ್ನಲ್ಲಿ ಬಂದ ಯೂಸುಫ್ ಪಠಾಣ್ ಸಹ ರನ್ ದಾಖಲಿಸದೇ ವಿಕೆಟ್ ಒಪ್ಪಿಸಿದ್ದು, ತಂಡದ ಹಿನ್ನಡೆಗೆ ಕಾರಣವಾಯಿತು.
ಇದಾದ ನಂತರ ಇನಿಂಗ್ಸ್ ಕಟ್ಟುತ್ತಿದ್ದ ಜಾಕ್ ಕಾಲಿಸ್ ಸಹ 42 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 43 ರನ್ ದಾಖಲಿಸಿ ಚಾಹಲ್ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಕೆಕೆಆರ್ 107 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ಬಂದ ಸೂರ್ಯಕುಮಾರ್ ಅಜೇಯ 24 ರನ್ ದಾಖಲಿಸಿದರೆ, ಉತ್ತಪ್ಪ 22, ವಿನಯ್ 4 ರನ್ ಗಳಿಸಿ ಔಟಾದರು.
ಸ್ಕೋರ್ ವಿವರ
ಕೋಲ್ಕತಾ ನೈಟ್ರೈಡರ್ಸ್ 20 ಓವರ್ಗಳಲ್ಲಿ 7 ವಿಕೆಟ್ಗೆ 150
ಜಾಕ್ ಕಾಲಿಸ್ ಸಿ ಟಕವಾಲೆ ಬಿ ಚಾಹಲ್ 43, ಗೌತಮ್ ಗಂಭೀರ್ ಎಲ್ಬಿ ಸ್ಟಾರ್ಕ್ 0, ಮನೀಷ್ ಪಾಂಡೆ ಸಿ ಕೊಹ್ಲಿ ಬಿ ಮಾರ್ಕೆಲ್ 5, ಕ್ರಿಸ್ ಲಿನ್ ಸಿ ಡಿವಿಲಿಯರ್ಸ್ ಬಿ ವರುಣ್ 45, ಯೂಸುಫ್ ಸಿ ಕೊಹ್ಲಿ ಬಿ ವರುಣ್ 0, ಉತ್ತಪ್ಪ ಸಿ ಸ್ಟಾರ್ಕ್ ಬಿ ವರುಣ್ 22, ಸೂರ್ಯಕುಮಾರ್ ಅಜೇಯ 24, ವಿನಯ್ ಕುಮಾರ್ ಸಿ ಮಾರ್ಕೆಲ್ ಬಿ ಸ್ಟಾರ್ಕ್ 4
ಇತರೆ: (ಬೈ 1, ಲೆಗ್ಬೈ 2, ವೈಡ್ 4) ಒಟ್ಟು 7
ವಿಕೆಟ್ ಪತನ: 1-1, 2-10, 3-90, 4-90, 5-107, 6-129, 7-150
ಬೌಲಿಂಗ್ ವಿವರ
ಮಿಚೆಲ್ ಸ್ಟಾರ್ಕ್ 4-0-33-2
ಆಲ್ಬಿ ಮಾರ್ಕೆಲ್ 2-0-21-1
ವರುಣ್ ಎರಾನ್ 4-0-16-3
ಮುರಳಿಧರನ್ 2-0-25-0
ಚಾಹಲ್ 4-0-26-1
ಅಶೋಕ್ ದಿಂಡಾ 4-0-26-0