ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕ್ವಾರ್ಟರ್‌ಫೈನಲ್‌ಗೆ ಸಿಂಧು, ಗುರು

Mainashree
Updated On : 24 Apr 2014, 10:09 am

ಗಿಮ್ಚೋನ್ (ಕೊರಿಯಾ): ಉದಯೋನ್ಮುಖ ಆಟಗಾರ್ತಿ ಪಿ.ವಿ ಸಿಂಧು ಮತ್ತು ಆರ್‌ಎಂವಿ ಗುರುಸಾಯ್‌ದತ್ ಅವರು ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್ ವಿಭಾಗಗಳಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.
ಈ ಹಿಂದೆ ಜಪಾನ್ ಆಟಗಾರ್ತಿ ವಿರುದ್ಧ ಮೂರು ಬಾರಿ ಸೋಲನುಭವಿಸಿದ್ದ ವಿಶ್ವದ ನಂಬರ್ 10 ಆಟಗಾರ್ತಿ ಸಿಂಧು, ಈ ಪಂದ್ಯದಲ್ಲಿ ಹಿರೋಸ್ ಎರಿಕೋ ವಿರುದ್ಧ 14-21, 21-13, 21-18 ಗೇಮ್‌ಗಳ ಅಂತರದಿಂದ ಜಯ ಕಂಡುಕೊಂಡುಕೊಳ್ಳುವಲ್ಲಿ ಯಶಸ್ವಿಯಾದರು.
18 ವರ್ಷದ ಸಿಂಧು ಅವರು ಈಗ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್‌ನ ಬುಸಾನನ್ ಒಂಗ್ಬುಮ್ರುಂಗ್‌ಪಾನ್ ಅವರನ್ನು ಎದುರಿಸಲಿದ್ದಾರೆ. ವಿಶ್ವದ 18ನೇ ರ್ಯಾಂಕಿಂಗ್ ಹೊಂದಿರುವ ಥಾಯ್ಲೆಂಡ್ ಆಟಗಾರ್ತಿ ಪ್ರಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕೊರಿಯಾದ ಬೀ ಯೋನ್ ಜೂ ವಿರುದ್ಧ 22-24, 21-19, 21-15 ಗೇಮ್‌ಗಳ ಅಂತರದಿಂದ ಪ್ರಯಾಸದ ಜಯ ಕಂಡುಕೊಂಡಿದ್ದಾರೆ.
ಮಲೇಷ್ಯಾ ಓಪನ್ ಮತ್ತು ಮಕಾವು ಓಪನ್ ಜತೆಗೆ ಕಳೆದ ವರ್ಷ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಸಿಂಧು ಅವರು, ಬುಸಾನನ್ ವಿರುದ್ಧ ಆಡಿರುವ ಎರಡೂ ಪಂದ್ಯಗಳಲ್ಲಿ ಜಯ ಕಂಡಿದ್ದಾರೆ. ಹೀಗಾಗಿ ಸೆಮಿಫೈನಲ್ ಪ್ರವೇಶಿಸುವ ಭರವಸೆ ಮೂಡಿಸಿದ್ದಾರೆ.  ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಗುರುಸಾಯ್‌ದತ್ ಅವರು, ತೈಪೇಯ ವಾಂಗ್ ಜು ವೀ ಅವರನ್ನು 17-21, 21-13, 21-19 ಗೇಮ್‌ಗಳಿಂದ ಪರಾಭವಗೊಳಿಸಿದರು. ಈಗ ಅವರು ಶುಕ್ರವಾರ ನಡೆಯಲಿರುವ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಚೀನಾದ ಲಿವು ಕೈ ಅವರನ್ನು ಎದುರಿಸಲಿದ್ದಾರೆ.
ಭಾರತದ ಖ್ಯಾತ ಬ್ಯಾಡ್ಮಿಂಟನ್‌ಪಟು ಪರುಪಲ್ಲಿ ಕಶ್ಯಪ್ ಅವರು ಚೀನಾ ತೈಪೇಯ ಹು ಜನ್ ಹೋ ವಿರುದ್ಧ 25-23, 21-17 ಗೇಮ್‌ಗಳಿಂದ ಸೋಲನುಭವಿಸಿದ್ದಾರೆ.
ಇನ್ನು ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ಜೋಡಿ, ಥಾಯ್ಲೆಂಡ್‌ನ ಅರೂಕೆಸೂರನ್ ಡುಂಾನಾಂಗ್ ಮತ್ತು ವೋರಾವಿಚಿತೈಕುಲ ಕುಂಚಾಲಾ ಜೋಡಿಯನ್ನು 21-11, 21-18 ಗೇಮ್‌ಗಳಿಂದ ಪರಾಭವಗೊಳಿಸಿತು. ಭಾರತದ ಜೋಡಿ ಈಗ, ಮಲೇಷ್ಯಾದ ಅಶೆಲ್ಲಿ ಅಮೆಲಿಯಾ ಅಲಿಸಿಯಾ ಮತ್ತು ಸೂಂಗ್ ಫೀ ಚೂ ಜೋಡಿಯನ್ನು ಎದುರಿಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement