ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಚೆಸ್: ಅಧಿಬನ್‌ಗೆ ಸೋಲು

Mainashree
Updated On : 24 Apr 2014, 10:10 am

ಶಾರ್ಜಾ: ಗ್ರ್ಯಾಂಡ್‌ಮಾಸ್ಟರ್ ಬಿ ಅಧಿಬನ್ ಏಷ್ಯನ್ ಕಾಂಟಿನೆಂಟಲ್ ಚೆಸ್ ಚಾಂಪಿಯನ್‌ಶಿಪ್‌ನ ತೀವ್ರ ಒತ್ತಡದಿಂದ ಕೂಡಿದ ಪಂದ್ಯದಲ್ಲಿ ನಿ ಹೌ ವಿರುದ್ಧ ಸೋಲನುಭವಿಸಿದ್ದು, ಅಂಕಪಟ್ಟಿಯಲ್ಲಿ ಕುಸಿತ ಕಂಡಿದ್ದಾರೆ.
ಇದುವರೆಗೂ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಅಧಿಬನ್ ಗುರುವಾರ ನಡೆದ ಏಳನೇ ಸುತ್ತಿನ ಪಂದ್ಯದಲ್ಲಿ ಚೀನಾದ ನಿ ಹೌ ವಿರುದ್ಧ ಮುಖಭಂಗ ಅನುಭವಿಸಿದ್ದಾರೆ. ಈ ಮೂಲಕ ಅಧಿಬನ್ ಜಂಟಿ ಐದನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.
ಅಧಿಬನ್ ಈ ಪಂದ್ಯದಲ್ಲಿ ಸೋಲನುಭವಿಸಿ ಐದನೇ ಸ್ಥಾನಕ್ಕೆ ಕುಸಿದಿದ್ದರೂ, ಭಾರತದ ಆಟಗಾರರಲ್ಲಿ ಅಧಿಬನ್ ಅವರದು ಶ್ರೇಷ್ಠ ಪ್ರದರ್ಶನವಾಗಿದೆ. ಇನ್ನು ಮುಂದಿನ ವಿಶ್ವ ಚೆಸ್ ಕಪ್ ಪಂದ್ಯಾವಳಿಗೆ ಅರ್ಹತೆ ಪಡೆಯಲು ಅಧಿಬನ್ ಉಳಿದ ಎರಡು ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಿ ಗೆಲವು ಸಾಧಿಸಲೇಬೇಕಾಗಿದೆ.   ಇನ್ನು ಎರಡು ಸುತ್ತುಗಳ ಬಾಕಿ ಇರುವಂತೆ ಪರಿಮರ್ಜನ್ ನೇಗಿ, ಅಭಿಜಿತ್ ಗುಪ್ತಾ, ದೀಪ್‌ಸೇನ್ ಗುಪ್ತಾ ಮತ್ತು ಎ.ಪಿ ಸೇತುರಾಮನ್ ಪಂದ್ಯಾವಳಿಯಲ್ಲಿ 4.5 ಅಂಕಗಳನ್ನು ಸಂಪಾದಿಸುವ ಮೂಲಕ ಜಂಟಿ ಎಂಟನೇ ಸ್ಥಾನದಲ್ಲಿದ್ದಾರೆ. ಈ ಪಂದ್ಯಾವಳಿಯಲ್ಲಿ ಅಗ್ರ ಐದು ಸ್ಥಾನಗಳನ್ನು ಪಡೆಯುವ ಆಟಗಾರರು 2015ರಲ್ಲಿ ಅಜರ್‌ಬಜೇನ್‌ನ ಬಾಕುವಿನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಅರ್ಹತೆ ಪಡೆಯಲಿದ್ದಾರೆ.
ಇನ್ನು ಈ ಸುತ್ತಿನಲ್ಲಿ ಭಾರತದ ಕೃಷ್ಣನ್ ಶಶಿಕಿರಣ್ ತಮ್ಮ ಎದುರಾಳಿ ಕ್ಸಿಯಾಂಗ್‌ಜಿ ವಿರುದ್ಧ ಸೋಲನುಭವಿಸಿದರು. ಇನ್ನು ಮಹಿಳೆಯರ ವಿಭಾಗದಲ್ಲಿ ತಾನಿಯಾ ಸಖ್‌ದೇವ್ ತಮ್ಮ ಎದುರಾಳಿ ಹಾಂಗ್ ತಿ ನು ವಿರುದ್ಧ ಡ್ರಾ ಸಾಧಿಸಿದರು. ಇನ್ನು ಈಶಾ ಕರವಾಡೆ ತಮ್ಮ ಎದುರಾಳಿ ಸೌಮ್ಯ ಸ್ವಾಮಿನಾಥನ್ ವಿರುದ್ಧ ಗೆಲವು ಸಾಧಿಸಿದರೆ, ಸ್ವಾತಿ ಘಾಟೆ ತಮ್ಮ ಎದುರಾಳಿ ಬಿಬಿಸ್ಸರಾ ವಿರುದ್ಧ ಗೆಲವು ದಾಖಲಿಸಿದರು.  ಇಂಡೋನೇಷ್ಯಾದ ಐರಿನೆ ಖರಿಶ್ಮಾ ಸುಕುಂದರ್ ಅವರು ಮಹಿಳೆಯರ ವಿಭಾಗದಲ್ಲಿ ಜಯದ ಹಾದಿಯನ್ನು ಮುಂದುವರಿಸಿದ್ದಾರೆ.  7 ಅಂಕಗಳ ಪೈಕಿ ಅವರು ಈಗ 6.5 ಅಂಕಗಳನ್ನು ಹೊಂದುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement