ತಾತಂಡ ಕಪ್ ಕೊಡವ ಕೌಟುಂಬಿಕ ಹಾಕಿ; ಪಾಲೇಂಗಡ ಸಹಿತ 6 ತಂಡಗಳ ಮುನ್ನಡೆ
ವಿರಾಜಪೇಟೆ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ತಾತಂಡ ಕಪ್ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಐದನೇ ದಿನವಾದ ಗುರುವಾರ ನಡೆದ ಪಂದ್ಯಗಳಲ್ಲಿ ಆರು ತಂಡಗಳು ಮುನ್ನಡೆ ಸಾಧಿಸಿದವು.
ಆಕ್ರಮಣಕಾರಿ ಆಟ ಪ್ರದರ್ಶಿಸಿ ಎದುರಾಳಿ ಮೇಲೆ ಸಂಪೂರ್ಣವಾಗಿ ಹಿಡಿತ ಸಾಧಇಸಿದ ಪರಂದಂಡತಂಡ ಪಾಲೇಂಗಡ ತಂಡದ ವಿರುದ್ಧ 7-0 ಗೋಲುಗಳ ಮೂಲಕ ನಿರಾಯಾಸ ಗೆಲವು ಸಾಧಿಸಿದೆ.
ಪರಂದಂಡ ತಂಡದ ಪರವಾಗಿ ಸದಾ ಅವರು ಎರಡು ಗೋಲು ಬಾರಿಸಿದರೆ, ಪ್ರಿನ್ಸ್, ಪ್ರಸಾದ್, ರಂಜನ್, ಡಿಲ್ ಹಾಗೂ ಮೊಣ್ಣಪ್ಪ ತಲಾ ಒಂದು ಗೋಲು ಬಾರಿಸಿ ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪಾಲಂದಿರ ವರ್ಸಸ್ ಅಪಾಡೆರಂಡ ತಂಡದ ನಡುವೆ ನಡೆದ ಪಂದ್ಯದಲ್ಲಿ ಚೆಂಡಿನ ಮೇಲೆ ಹಿಡಿತಸಾಧಿಸಿದ ಪಾಲಂದಿರ ತಂಡ ಎದುರಾಳಿ ತಂಡವಾದ ಅಪಾಡೆರಂಡ ಪ್ರಭುತ್ವ ಸಾಧಿಸುವ ಮೂಲಕ ತಂಡ 2-0 ಗೋಲುಗಳಿಂದ ಜಯ ಗಳಿಸಿತು. ಪಾಲಂದಿರ ತಂಡದ ಸಂದೇಶ್ ಹಾಗೂ ಜೀವನ್ ತಲಾ ಒಂದು ಗೋಲು ಹೊಡೆದರು.
ತೀವ್ರ ಪೈಪೋಟಿ: ಮಲ್ಲಮಾಡ ಮತ್ತು ಮೇವಾಡ ತಂಡದ ನಡುವಿನ ಪಂದ್ಯದಲ್ಲಿ ತೀವ್ರ ತರದ ಪೈಪೋಟಿ ಇತ್ತಾದರೂ ಮಲ್ಲಮಾಡ ತಂಡ 2-1 ಗೋಲುಗಳಿಂದ ಜಯ ಸಾಧಿಸಿತು ಮಲ್ಲಮಾಡ ಪರವಾಗಿ ಕರುಂಬಯ್ಯ 2 ಗೋಲು ಹಾಗೂ ಮೇವಾಡ ಪರವಾಗಿ ಸಚಿನ್ 1 ಗೋಲು ಗಳಿಸಿದರು.
ಪೆಮ್ಮುಡಿಯಾಂಡ ಮತ್ತು ಬಿದ್ದಾತ್ತಾಂಡ ನಡುವಿನ ಪಂದ್ಯದಲ್ಲಿ ಬಿದ್ದಾತ್ತಾಂಡ 3-0 ಗೋಲುಗಳಿಂದ ಜಯ ಸಾಧಿಸಿತು. ಬಿದ್ದಾತಂಡ ಪರ ವಿವೇಕ್ 1, ಮೇದಪ್ಪ 2 ಗೋಲು ಹೊಡೆದರು.
ಕಾಡೆಮಾಡ ವರ್ಸಸ್ ಉಳಿಯಾಡ ತಂಡದ ನಡುವಿ ಪಂದ್ಯದಲ್ಲಿ ಕಾಡೆಮಾಡ 5-0 ಗೋಲುಗಳಿಂದ ಜಯ ಗಳಿಸಿತು. ಕಾಡೆಮಾಡ ಪರವಾಗಿ ಚರ್ಮಣ್ಣ, ಕಾವೇರಪ್ಪ, ಹರೀಶ್, ಮಂದಣ್ಣ, ರಾಜಪ್ಪ ತಲಾ ಒಂದು ಗೋಲು ಹೊಡೆದರು.
ಕಲ್ಲಿಚಂಡ ಮತ್ತು ಕೋಟೆರ ತಂಡದ ನಡುವಿನ ಪಂದ್ಯದಲ್ಲಿ ಕೋಟೆರ ತಂಡ 2-0 ಗೋಲುಗಳಿಂದ ಜಯಗಳಿಸಿತು. ಭರತ್ ಹಾಗೂ ಕವನ್ 1 ಗೋಲು ಹೊಡೆದರು.
ಮಾಲೆಟೀರ ಮತ್ತು ಮಚ್ಚೇಂಗಡ ನಡುವಿನ ಪಂದ್ಯದಲ್ಲಿ ಮಚ್ಚೇಂಗಡ 3-1 ಗೋಲುಗಳಿಂದ ಜಯ ಸಾಧಿಸಿದೆ. ಮಚ್ಚೇಂಗಡ ಪರವಾಗಿ ಪೊನ್ನಣ್ಣ, ಭರತ್, ಅಯ್ಯಪ್ಪ ತಲಾ ಒಂದು ಗೋಲು ಹೊಡೆದು ತಂಡದ ಗೆಲವಿಗೆ ಆಸರೆಯಾದರು. ಮಾಲೆಟೀರ ಪರವಾಗಿ ನಂಜುಂಡ 1 ಗೋಲು ಹೊಡೆದರು.