ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಯುಎಸ್‌ಎ ಕರಾಟೆ: ಭಾರತಕ್ಕೆ 8 ಪದಕ

Mainashree
Updated On : 24 Apr 2014, 10:10 am

ನವದೆಹಲಿ: ಅತ್ಯುತ್ತಮ ಪ್ರದರ್ಶನ ನೀಡಿರುವ ಭಾರತದ ಕರಾಟೆಪಟುಗಳು ಲಾಸ್ ವೆಗಾಸ್‌ನಲ್ಲಿ ನಡೆದ ಯುಎಸ್‌ಎ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ 8 ಪದಕಗಳನ್ನು ಬಾಚಿಕೊಂಡಿದ್ದಾರೆ.
ಏ.18ರಿಂದ 21ರವರೆಗೆ ನಡೆದ ಈ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ 2 ಚಿನ್ನ ಹಾಗೂ 6 ಕಂಚಿನ ಪದಕಗಳು ಲಭಿಸಿದೆ. ಭಾರತತಂಡ 8 ಕರಾಟೆಪಟುಘಲ ತಂಡ ಈ ಪಂದ್ಯಾವಳಿಯಲ್ಲಿ ಭಾಗವಹಿಸಿತ್ತು. 15 ರಾಷ್ಟ್ರಗಳಿಂದ 3 ಸಾವಿರಕ್ಕೂ ಹೆಚ್ಚಿನ ಕರಾಟೆ ಪಟುಗಳು ಭಾಗವಹಿಸಿದ್ದರು.
ಮಹಗಿಳೆಯರ ವಿಭಾಗದಲ್ಲಿ ಮುಂಬೈನ ಕಾರ್ಲ್ ವಾಟ್ಚಾ ಒಂದು ಚಿನ್ನ ಹಾಗೂ ಒಂದು ಕಂಚಿನ ಪದಕ, ಮುಂಬೈನ ತೊಯೆಶಾ ಖಟಾವ್ ಒಂದು ಚಿನ್ನ ಹಾಗೂ ಮೂರು ಕಂಚಿನ ಪದಕ ಪಡೆದರು.
ಪುರುಷರ ವಿಭಾಗದಲ್ಲಿ ದೆಹಲಿಯ ಪ್ರಣಯ್ ಶರ್ಮಾ, ಮುಂಬೈನ ಆಕಾಶ್ ಸಮೀರ್, ತಲಾ ಒಂದು ಕಂಚಿನ ಪದಕ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement