ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಯೂತ್ ಒಲಿಂಪಿಕ್ಸ್‌ಗೆ ಗೌರವ್ ಸೋಲಂಕಿ

Mainashree
Updated On : 24 Apr 2014, 10:10 am

ನವದೆಹಲಿ: ಏಷ್ಯನ್ ಚಾಂಪಿಯನ್ ಬಾಕ್ಸರ್ ಗೌರವ್ ಸೋಲಂಕಿ (52ಕೆಜಿ) ಅವರು ಯೂತ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಬ್ರೆಜಿಲ್‌ನ ಕಾರ್ಲೋಸ್ ಸಿಲ್ವಾ ವಿರುದ್ಧ ಜಯ ಸಾಧಿಸುವ ಮೂಲಕ ಸೋಲಂಕಿ, ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸಿಕ್ಕಿದ್ದ ಕೊನೆಯ ಅವಕಾಶವನ್ನು ಸದುಪಯೋಗಪಡಿಸಿಕೊಂಡರು.
ಹರ್ಯಾಣದ ಸೋಲಂಕಿ ಅವರು ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ ಯೂತ್ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನ ಮಹತ್ವದ ಪಂದ್ಯದಲ್ಲಿ ಬ್ರೆಜಿಲ್ ಆಟಗಾರನ ವಿರುದ್ಧ 2-1 ಅಂಕಗಳಿಂದ ಜಯ ಕಂಡುಕೊಂಡರು. ಈ ಮುನ್ನ ಇದೇ ಪಂದ್ಯಾವಳಿಯಲ್ಲಿ ಯೂತ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಳ್ಳುವ ಅವಕಾಶ ಗಿಟ್ಟಿಸಿದ್ದರು. ಆದರೆ, ಆ ಎರಡೂ ಅವಕಾಶಗಳಲ್ಲಿ ಅವರು ವೈಫಲ್ಯ ಕಂಡಿದ್ದರು.
ಒಂದು ಪದಕ ಮತ್ತು ಎರಡು ಒಲಿಂಪಿಕ್ಸ್ ಅರ್ಹತೆ ಪಡೆಯುವ ಮೂಲಕ ಪಂದ್ಯಾವಳಿಯಲ್ಲಿ ಭಾರತ ತನ್ನ ಹೋರಾಟ ಮುಕ್ತಾಯಗೊಳಿಸಿದೆ. ಶ್ಯಾಮ್ ಕಕಾರಾ (49ಕೆಜಿ) ಪದಕ (ಕಂಚು) ಗೆದ್ದ ಭಾರತದ ಏಕೈಕ ಬಾಕ್ಸರ್ ಎನಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement