ರಾಂಗ್ಲರ್ ಬೈಕ್ ಸವಾರಿಗೆ ಚಾಲನೆ
ಬೆಂಗಳೂರು: ದೇಶಾದ್ಯಂತ ಬೈಕ್ ಸಾಹಸಿಗಳನ್ನು ಶೋಧಿಸಿದ ನಂತರ, ರಾಂಗ್ಲರ್ ತನ್ನ ಟಾಪ್ 10 ಟ್ರೂ ವಂಡರರ್ಸ್ ಬೈಕ್ ಸವಾರರನ್ನು ಪತ್ತೆ ಮಾಡಿದೆ.
ಈಗ ಆ ಹತ್ತು ಬೈಕ್ ಸಹಾಸಿಗಳ ಪೈಕಿ, ಇಬ್ಬರು ಸವಾರರು ಬೆಂಗಳೂರಿನಿಂದ ತಮ್ಮ ಒಂದು ವಾರದ ಪ್ರಯಾಣವನ್ನು ಗುರುವಾರ ರಾಜಧಾನಿಯಿಂದ ಆರಂಭಿಸಿದರು.
ಕುಸುಮಾಕರ್ ದ್ವಿವೇದಿ ಅವರು ಬೆಂಗಳೂರಿನ ಶಿವಾಜಿ ನಗರದಿಂದ ತಮ್ಮ ಪ್ರಯಾಣವನ್ನು ಬೆಳೆಸಿದರು. ಅವರು ತಮಿಳುನಾಡು ಪಾಂಡಿಚೇರಿ ಮತ್ತು ಕೇರಳ ಮೂಲಕ ಬೈಕ್ ರೈಡ್ ಮಾಡಿಕೊಂಡು ಮತ್ತೆ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಅಗ್ರ 10 ಬೈಕ್ ಸವಾರರಲ್ಲಿ ಬೆಂಗಳೂರಿನವರೇ ಆದ ಇನ್ನೊಬ್ಬ ಸವಾರ ಜಯಕೃಷ್ಣ ಮೆನಿಯಮ್ ಅವರು ಬೆಂಗಳೂರಿನ ಇಂದಿರಾನಗರದಿಂದ ತಮ್ಮ ಪ್ರಯಾಣ ಬೆಳೆಸಿದರು.ಇದರಲ್ಲಿ ಗೆದ್ದವರಿಗೆ ಕವಾಸಕಿ ಣ800 ಬೈಕ್ ನೀಡಲಾಗುತ್ತದೆ.