ಇದು ಯಾವುದೋ ರೋಗಕ್ಕೆ ತುತ್ತಾದ ಅಥವಾ ಅಪಘಾತದಲ್ಲಿ ಸಿಲುಕಿ ಗಾಯಗೊಂಡ ವ್ಯಕ್ತಿಯ ಮುಖವಲ್ಲ. ಪ್ರಮುಖ ಕ್ರೀಡೆಗಳಲ್ಲೊಂದಾದ ಬೇಸ್ಬಾಲ್ನಲ್ಲಿ ಚೆಂಡು ನೇರವಾಗಿ ಮುಖಕ್ಕೆ ಬಡಿದ ಪರಿಣಾಮ ಹೀಗೆ ಊದಿಕೊಂಡಿದೆ. 90 ಮೈಲಿ ವೇಗದಲ್ಲಿ ಬಂದ ಚೆಂಡು ಮುಖಕ್ಕೆ ಬಡಿದ ಹಿನ್ನೆಲೆಯಲ್ಲಿ ಅಮೆರಿಕನ್ ಲೀಗ್ನ ಬೇಸ್ಬಾಲ್ ತಂಡ ಹೌಸ್ಟಾನ್ ಆಸ್ಟ್ರಾಸ್ ಪರ ಆಡುತ್ತಿರುವ ಡೆಲಿನೋ ಡಿಶೀಲ್ಡ್ಸ್ರ ಮುಖ ಹೀಗೆ ಊದಿಕೊಂಡಿದೆ. ಅಷ್ಟು ವೇಗದಲ್ಲಿ ಬಂದ ಚೆಂಡೊಂದು ಕಲ್ಲಂಗಡಿ ಹಣ್ಣಿಗೆ ಬಡಿದರೆ, ಅದು ಸಂಪೂರ್ಣವಾಗಿ ಛಿದ್ರವಾಗುತ್ತದೆ. ಅಂದರೆ, ಆ ನೋವನ್ನು ಆತ ಹೇಗೆ ತಾಳಿಕೊಂಡಿರಬೇಕು. ಮುಖ ಅಷ್ಟೊಂದು ಊದಿಕೊಂಡಾಗ್ಯೂ ಇನ್ನೂಂದು ಪಂದ್ಯದಲ್ಲಿ ನಾನು ಮಿಂಚುತ್ತೇನೆ ಎಂಬ ಕ್ರೀಡಾ ಸ್ಫೂರ್ತಿಯಲ್ಲಿ ನಗು ಚೆಲ್ಲುತ್ತಿರುವ ಡೆಲಿನೋ ಕ್ರೀಡಾಪಟುಗಳಿಗೊಂಡು ಸ್ಫೂರ್ತಿ.