ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಚೆಸ್: ಜಂಟಿ 2ನೇ ಸ್ಥಾನಕ್ಕೆ ಅಧಿಬನ್

Vishwanath S
Updated On : 26 Apr 2014, 1:10 am

ಶಾರ್ಜಾ: ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಬಿ. ಅಧಿಬನ್ 13ನೇ ಏಷ್ಯನ್ ಕಾಂಟಿನೆಂಟಲ್ ಚೆಸ್ ಚಾಂಪಿಯನ್‌ಶಿಪ್‌ನ ಎಂಟನೇ ಸುತ್ತಿನಲ್ಲಿ ಜಯಗಳಿಸುವುದರೊಂದಿಗೆ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ.  ರಾಷ್ಟ್ರೀಯ ಮಾಜಿ ಚಾಂಪಿಯನ್ ಅಧಿಬನ್ ಅವರು ಕಜಕಿಸ್ತಾನದ ರಿನಾತ್ ಜುಮಾಬಯೇವ್ ಅವರನ್ನು ಸೋಲಿಸುವ ಮೂಲಕ ಈ ಮೇಲುಗೈ ಸಾಧಿಸಿದರು.
ಕಳೆದ ಏಳನೇ ಸುತ್ತಿನಲ್ಲಿ ಚೀನಾದ ನೀ ಹೂವಾ ವಿರುದ್ಧ ಸೋಲನುಭವಿಸುವುದರೊಂದಿಗೆ ಹಿನ್ನಡೆ ಅನುಭವಿಸಿದ್ದ ಭಾರತೀಯ ಆಟಗಾರ, ಎಂಟನೇ ಸುತ್ತಿನಲ್ಲಿ ಜಯಗಳಿಸುವುದರೊಂದಿಗೆ 6 ಅಂಕಗಳಿಸಿ ನೀ ಹೂವಾ ಮತ್ತು ವಿಶ್ವ ಮಾಜಿ ಚಾಂಪಿಯನ್ ಉಜ್ಬೇಕಿಸ್ತಾನದ ರುಸ್ತಂ ಕಾಸಿಮ್‌ಝನೊವಾ ಅವರೊಂದಿಗೆ ಜಂಟಿ ಎರಡನೇ ಸ್ಥಾನದ ಗೌರವ ಪಡೆದಿದ್ದಾರೆ.
ಚೀನಾದ ಯು ಯಾಂಗೈ ಒಟ್ಟು 6.5 ಅಂಕಗಳಿಸುವ ಮೂಲಕ ಅಗ್ರಸ್ಥಾನದಲ್ಲಿ ಹೆಜ್ಜೆ ಹಾಕಿದ್ದಾರೆ.
ಮೈಸೂರಿನ ವಿವೇಕಾನಂದ ಪ್ರಥಮ
ಮೈಸೂರು: ನಗರದಲ್ಲಿ ನಡೆದ ಫಿಡೆ ರೇಟಿಂಗ್ 1800 ಒಳಗಿನ ರಾಷ್ಟ್ರಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಮೈಸೂರಿನ ಎಲ್.ವಿವೇಕಾನಂದ 9 ಅಂಕಗಳೊಂದಿಗೆ ಪ್ರಥಮ ಬಹುಮಾನ ಪಡೆದರು.
ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ 10 ಅಂಕಗಳಿಗೆ 9 ಅಂಕ ಪಡೆದ ವಿವೇಕಾನಂದ (1727 ರೇಟಿಂಗ್)ಗೆ 20 ಸಾವಿರ ನಗದು ಮತ್ತು ಟ್ರೋಫಿ ನೀಡಲಾಯಿತು. ಅಂತೆಯೇ ಕರ್ನಾಟಕದ ಧನುಷ್ ಭಾರದ್ವಾಜ್ 8.5 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದರು. ಇವರಿಗೆ 12 ಸಾವಿರ ನಗದು ಮತ್ತು ಟ್ರೋಫಿ ನೀಡಿ ಗೌರವಿಸಲಾಯಿತು.
20 ತಿಂಗಳಲ್ಲಿ ಮೊದಲ ಬಾರಿಗೆ ಸೋತ ಮೈಕೆಲ್ ಫೆಲ್ಪ್ಸ್
ಮೆಸಾ (ಅಮೆರಿಕ): ಈಜಿನ ಸೂಪರ್ ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ಮೈಕೆಲ್ ಫೆಲ್ಪ್ಸ್ ಅವರು, ಕಳೆದ 20ತಿಂಗಳಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ ಎರಡನೇ ಸ್ಥಾನ ಗಿಟ್ಟಿಸಿದ್ದಾರೆ.
ಆದರೆ, ಸ್ಪರ್ಧೆಗೆ ಮರಳಿದ ನಂತರ ತಮ್ಮಲ್ಲಿ ಇನ್ನೂ ಎಷ್ಟು ಶಕ್ತಿ ಇದೆ ಎಂಬುದನ್ನು ಪ್ರದರ್ಶಿಸಿದರು. 18 ಚಿನ್ನ ಸೇರಿದಂತೆ ಒಟ್ಟು 22 ಒಲಿಂಪಿಕ್ಸ್ ಪದಕ ಗೆದ್ದಿರುವ ಫೆಲ್ಪ್ಸ್, ಮೆಸಾ ಗ್ರ್ಯಾಂಡ್ ಪ್ರಿಕ್ಸ್‌ನ 10 ಮೀಟರ್ ಬಟರ್‌ಫ್ಲೈ ಫೈನಲ್‌ನಲ್ಲಿ ರೇಯಾನ್ ಲಾಚಟೆ ಎದುರು ಸೋಲನುಭವಿಸಿದರು. 51.93 ಅವಧಿಯಲ್ಲಿ ಗುರಿ ಸೇರಿದ ಲಾಚಟೆ ಅವರು ಮೊದಲ ಸ್ಥಾನ ಪಡೆದು, ಈ ವರ್ಷದ ವಿಶ್ವದ ವೇಗದ ಎರಡನೇ ಈಜುಪಟು ಎಂಬ ದಾಖಲೆಗೆ ಪಾತ್ರರಾದರು. ಇನ್ನು 52.13 ಅವಧಿಯಲ್ಲಿ ಗುರಿ ಸೇರಿದ ಫೆಲ್ಪ್ಸ್, 2014ರಲ್ಲಿ ನಾಲ್ಕನೇ ವೇಗದ ಈಜುಪಟು ಎನಿಸಿದರು.  'ನಾನು ಏನು ಮಾಡಬೇಕಾಗಿತ್ತು ಅದನ್ನು ಈ ಸ್ಪರ್ಧೆಯಲ್ಲಿ ಮಾಡಿದ್ದನೆ. ಸ್ಪರ್ಧೆ ವಿನೋದದಿಂದ ಕೂಡಿತ್ತು' ಎಂದು 52 ಸೆಕೆಂಡ್‌ಗಳ ಗುರಿ ನಿಗದಿಪಡಿಸಿಕೊಂಡಿದ್ದ ಫೆಲ್ಪ್ಸ್ ತಿಳಿಸಿದರು. ಇನ್ನು ಲೊಚಟೆ, ತಮ್ಮ ಅಮೆರಿಕ ಒಲಿಂಪಿಕ್ಸ್ ತಂಡದ ಸಹ ಈಜುಪಟು ಅವರೊಂದಿಗೆ ಸ್ಮರಣೀಯ ಗಳಿಗೆಗಳನ್ನು ಕಳೆದರು. ವೈಯಕ್ತಿಕ ಮಿಡ್ಲೆ ವಿಭಾಗದಲ್ಲೂ ಅವರು ಫೆಲ್ಪ್ಸ್ ವಿರುದ್ಧ ಸೆಣಸಲು ತೀವ್ರ ಉತ್ಸುಕರಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement