ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ತಾತಂಡ ಕಪ್: 14 ತಂಡಗಳ ಮುನ್ನಡೆ

Vishwanath S
Updated On : 26 Apr 2014, 1:09 am

ವಿರಾಜಪೇಟೆ:  ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ತಾತಂಡ ಕಪ್ ಕೊಡವ ಕೌಟುಂಬಿಕ ಹಾಕಿ ಕೂಟದ ಆರನೇ ದಿನವಾದ ಶುಕ್ರವಾರ 14 ತಂಡಗಳು ಮುನ್ನಡೆ ಸಾಧಿಸಿವೆ.
ಆಟೋ ಮುಷ್ಕರದ ನಡುವೆಯೂ ಶುಕ್ರವಾರ ನಡೆದ ಹಾಕಿ ಪಂದ್ಯದಲ್ಲಿ ವಾಟೇರಿರ, ಕೊದೇಂಗಡ, ದೇಪಾಡಿಯಂಡ, ಬಾರಿಯಂಡ, ಮಾದೇರಿರ, ಅರಿಯಡ, ಕಬ್ಬಚ್ಚಿರ, ಕುಚ್ಚಿಮಾಡ, ಐಚ್ಚಂಡ, ಕುಪ್ಪಂಡ, ಬಡ್ಡೀರ, ತೀತಿಮಾಡ, ಚೇಂದಿರ, ಇಟ್ಟೀರ ತಂಡಗಳು ಜಯಗಳಿಸಿ, ಮುಂದಿನ ಹಂತಕ್ಕೆ ಆಯ್ಕೆಯಾಗಿವೆ.
ವಾಟೇರಿರ ತಂಡವು ಮಂಡಂಗಡ ತಂಡದ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ 4-3 ಅಂತರದಿಂದ ವಿಜಯಿಯಾದರೆ, ವಾಟೇರಿರ ತಂಡದ ಪರವಾಗಿ ಪೂವಣ್ಣ, ಮಾದಪ್ಪ, ಮಣ್ಣಪ್ಪ, ನಾಣಯ್ಯ ತಲಾ 1 ಗೋಲು ಗಳಿಸಿದರು. ಮಂಡಂಗಡ ತಂಡದ ಪರ ಮೋಹನ್ 2 ಗೋಲು, ಕೀರ್ತನ್ 1 ಗೋಲು ಗಳಿಸಿದರು.
ಚೊಟ್ಟಕಾಳಪ್ಪಂಡ ಮತ್ತು ಕೊದೇಂಗಡ ತಂಡದ ಸೆಣಸಾಟದಲ್ಲಿ ಕೊದೇಂಗಡ ತಂಡವು 2-1 ಅಂತರದಿಂದ  ಜಯ ಗಳಿಸಿತು. ಕೊದೇಂಗಡ ತಂಡದ ಪರವಾಗಿ ದಿಲನ್ ಮತ್ತು ದಿವಿನ್ ತಲಾ 1 ಗೋಲು ಮತ್ತು ಚೋಟ್ಟಕಾಳಪ್ಪಂಡ ಪರ ಶರಣ್ 1 ಗೋಲು ದಾಖಲಿಸಿದರು.
ದೇಪಾಡಿಯಂಡ ಸುಲಭ ಜಯ: ಕುಟ್ಟೇರಿರ ಮತ್ತು ದೇಪಾಡಿಯಂಡ ತಂಡದ ಸೆಣಸಾಟದಲ್ಲಿ ದೇಪಾಡಿಯಂಡ 5-0 ಅಂತರದಿಂದ ಸುಲಭ ಜಯಗಳಿಸಿತು. ದೇಪಾಡಿಯಂಡದ ಪರವಾಗಿ ಸುಬ್ಬಯ್ಯ ಭರ್ಜರಿ 3 ಗೋಲು ದಾಖಲಿಸಿದರೆ, ಕುಶಾಲಪ್ಪ, ಪೊನ್ನಣ್ಣ ತಲಾ 1 ಗೋಲು ಬಾರಿಸಿದರು.
ಬಾರಿಯಂಡ ಮತ್ತು ಚೆರಿಯಪಂಡ ನಡುವಿನ ಪಂದ್ಯದಲ್ಲಿ ಬಾರಿಯಂಡ ತಂಡವು 1-0 ಗೋಲುಗಳಿಂದ ಜಯ ಗಳಿಸಿದ್ದು, ಬಾರಿಯಂಡ ತಂಡದ ಭರತ್ 1 ಗೋಲು ದಾಖಲಿಸಿದರು.
ಮಾದೇರಿರ ಮತ್ತು ಕನ್ನಂಡ ತಂಡದ ನಡುವಿನ ಸೆಣಸಾಟದಲ್ಲಿ ಮಾದೇರಿರ ತಂಡವು ಟೈ ಬ್ರೇಕರ್‌ನಲ್ಲಿ 2-0 ಅಂತರದಲ್ಲಿ ಜಯಗಳಿಸಿತು.
ಅರಿಯಡ ಭರ್ಜರಿ ಮುನ್ನಡೆ: ಅರಿಯಡ ಮತ್ತು ಕುಪ್ಪಂಡ ತಂಡದ ನಡುವಿನ ಪಂದ್ಯದಲ್ಲಿ ಅರಿಯಡ ತಂಡವು ಭರ್ಜರಿ ಪ್ರದರ್ಶನ ನೀಡಿ 5- 0 ಅಂತರದಿಂದ ಜಯ ದಾಖಲಿಸಿತು. ಅಚ್ಚಕಾಳೀರ ಮತ್ತು ಕಬ್ಬಚ್ಚಿರ ನಡುವಿನ ಪಂದ್ಯದಲ್ಲಿ ಕಬ್ಬಚ್ಚಿರ ತಂಡವು 3-0 ಗೋಲಿನಿಂದ ವಿಜಯಿಯಾಯಿತು.
 ಚೋನಿರ ಮತ್ತು ಕುಚ್ಚಿಮಾಡ ನಡುವಿನ ಸೆಣಸಾಟದಲ್ಲಿ ಕುಚ್ಚಿಮಾಡ ತಂಡವು 2-0 ಅಂತರಿಂದ ಜಯ ಗಳಿಸಿತು. ಐಚ್ಚಂಡ ಮತ್ತು ಕುರುವಂಡ (ಕೆಡಿ) ನಡುವಿನ ಪಂದ್ಯದಲ್ಲಿ ಐಚ್ಚಂಡ 4-0 ಅಂತರಿಂದ ಜಯ ಗಳಿಸಿತು.       ಕುಪ್ಪಂಡ (ಕೈಕೇರಿ)-ಪುಲಿಯಂಡ ಪಂದ್ಯದಲ್ಲಿ ಕುಪ್ಪಂಡ 5-0 ಅಂತರದಿಂದ ಜಯ ಗಳಿಸಿತು. ಬೋಟಳಂಡ ಮತ್ತು ಬಡ್ಡೀರ ನಡುವಿನ ಪಂದ್ಯದಲ್ಲಿ ಬಡ್ಡೀರ 2-1 ಅಂತರದಿಂದ ಜಯ ಗಳಿಸಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement